ಪ್ರಕೃತಿ, ಜಲಸಂಪನ್ಮೂಲ ಉಳಿಸುವ ಕೆಲಸ ಮಾಡಿದರೆ ಮುಂದಿನ ಪೀಳಿಗೆ ನೆಮ್ಮದಿಯ ಬದುಕು :ಡಿ.ಎಸ್.ರಮೇಶ್
ದಾವಣಗೆರೆ,ಮೇ.2 : ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಿ.ಎಸ್.ರಮೇಶ ಉದ್ಘಾಟಿಸಿದರು
ನಂತರ ಮಾತನಾಡಿದ ಅವರು ಪ್ರಕೃತಿ, ಜಲಸಂಪನ್ಮೂಲ ಉಳಿಸುವ ಕೆಲಸ ಮಾಡಿದರೆ ಮಾತ್ರ ಮುಂದಿನ ಪೀಳಿಗೆ ನೆಮ್ಮದಿಯ ಬದುಕುವುದು ಎಂದರು.ಈ ಹಿಂದೆ ಭಗೀರಥ ಮಹರ್ಷಿಯು ಪ್ರಕೃತಿ ಉಳಿಸುವ ಸಲುವಾಗಿ ಧರೆಗೆ ಗಂಗೆ ತರಲು ಪ್ರಯತ್ನಿಸಿದ ಉಲ್ಲೇಖ ಇತಿಹಾಸದಲ್ಲಿದೆ. ಅವರು ಯಾವುದೇ ರೀತಿ ಭಾಷಣದಲ್ಲಿ ಹೇಳಿಲ್ಲ. ವಚನದಲ್ಲಿ ರಚಿಸಿಲ್ಲ. ಅವರು ಗಂಗೆಯನ್ನೇ ಧರೆಗೆ ತರುವ ಮಹತ್ತರ ಕಾರ್ಯ ಮಾಡಿದ್ದಾರೆ. ಅವರನ್ನು ಸ್ಮರಿಸುವ ಮೂಲಕ ನೀರನ್ನು ಸದ್ಬಳಕೆ ಮಾಡಿಕೊಂಡು ಪ್ರಕೃತಿ ಉಳಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಹರಿಹರದ ಸರ್ಕಾರಿ ಕಾಲೇಜಿನ ಪ್ರೊ. ಎಸ್.ಆರ್. ಅಂಜಿನಪ್ಪ ಮಾತನಾಡಿ, ಕಷ್ಟದ ದಿನಗಳಲ್ಲಿ ಈಗ ನಾವು ಜಯಂತಿಗಳನ್ನು ಆಚರಣೆ ಮಾಡುತ್ತಿದ್ದು, ಈ ಮೂಲಕ ಜಲಕ್ಷಾಮಕ್ಕೆ ಪರಿಹಾರ ಮಾರ್ಗೋಪಾಯ ಕಂಡುಕೊಂಡಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.
ಜಿಪಂ ಸಿಇಒ ಸಿ.ಅಶ್ವತಿ, ತಹಶೀಲ್ದಾರ್ ಸಂತೋಷ್ ಕುಮಾರ್, ಮೇಯರ್ ಅನಿತಾಬಾಯಿ, ಉಪಮೇಯರ್ ಮಂಜಮ್ಮ, ಸದಸ್ಯ ಗುರುರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಸಿದ್ದಲಿಂಗಪ್ಪ, ಬಸವರಾಜಪ್ಪ, ನೌಕರರ ಸಂಘದ ಅಧ್ಯಕ್ಷ ಎನ್.ಎಸ್.ಚಂದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.