ನದಿಗೆ ಬಿದ್ದು ದಂಪತಿ ಮೃತ್ಯು
Update: 2017-05-02 21:44 IST
ಮಡಿಕೇರಿ ಮೇ 2 : ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಕಾರ್ಮಿಕ ದಂಪತಿ ಮೃತಪಟ್ಟ ಘಟನೆ ಕಣ್ಣಂಗಾಲ ಗ್ರಾಮದ ಹಚ್ಚಿನಾಡುವಿನಲ್ಲಿ ನಡೆದಿದೆ.
ಹಚ್ಚಿನಾಡು ಗ್ರಾಮದ ತೋಟದ ಮಾಲಕರೊಬ್ಬರ ಲೈನ್ ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕರಾದ ಪಣಿಯರವರ ಚಿಣ್ಣು (50) ಹಾಗೂ ಅವರ ಪತ್ನಿ ಪಣಿಯರವರ ಅಮ್ಮುಣಿ (43) ಮೃತರು.
ಕಾವೇರಿ ನದಿಯಲ್ಲಿ ಬಟ್ಟೆ ತೊಳೆಯುತ್ತಿದ್ದ ಅಮ್ಮುಣಿ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದು, ಈ ಸಂದರ್ಭ ಅವರನ್ನು ರಕ್ಷಣೆ ಮಾಡಲು ಹೋದ ಪತಿ ಚಿಣ್ಣು ಕೂಡ ನದಿ ಪಾಲಾಗಿದ್ದಾರೆ. ಮೃತದೇಹಗಳನ್ನು ನದಿಯಿಂದ ಹೊರ ತೆಗೆಯಲಾಗಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದಂಪತಿ ಮೂವರು ಮಕ್ಕಳನ್ನು ಅಗಲಿದ್ದಾರೆ.