×
Ad

ಉಪ್ಪಾರ ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ-ಡಾ.ರಫೀಕ್ ಅಹಮದ್

Update: 2017-05-02 22:13 IST

ತುಮಕೂರು.ಮೇ.02: ಭಗೀರಥ ಸಮುದಾಯಕ್ಕೆ ಸೇರಿದ ಜನರ ಅಭಿವೃದ್ಧಿಗೆ ಶ್ರಮಿಸುವ ಉದ್ದೇಶದಿಂದ ಸರಕಾರ 2017-18ನೆ ಸಾಲಿನ ಬಜೆಟ್‌ನಲ್ಲಿ ಉಪ್ಪಾರ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದೆ ಎಂದು ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ.

ನಗರದ ಟೌನ್‌ಹಾಲ್ ಮುಂಭಾಗದಲ್ಲಿ ಜಿಲ್ಲಾಡಳಿತ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿದ್ದ ಭಗೀರಥ ಜಯಂತಿ ಅಂಗವಾಗಿ ಮಾತನಾಡಿದವರು, ತಳಸಮುದಾಯಗಳ ಅಭಿವೃದ್ಧಿಗೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಒತ್ತು ನೀಡುತ್ತಿದೆ ಎಂದರು.

ನಮ್ಮ ನಾಡಿನ ನದಿಯೊಂದಕ್ಕೆ ಭಾಗೀರಥಿ ಅಥವಾ ಭಗೀರಥ ಎಂದು ಕರೆಯುತ್ತೇವೆ.ಯುದ್ದದಲ್ಲಿ ಸಾವನ್ನಪ್ಪಿದ ತನ್ನ ತಾತ, ಮುತ್ತಾತ್ತಂದಿರನ್ನು ಮೋಕ್ಷ ಕಾಣಿಸಲು ಭಗೀರಥ ಮಹರ್ಷಿ ಕಠಿಣ ತಪ್ಪಸ್ಸು ಮಾಡಿ ಭೂಮಿಗೆ ಗಂಗೆಯನ್ನು ತಂದರು ಎಂಬುದನ್ನು ಪುರಾಣದಲ್ಲಿ ಓದಿದ್ದೇವೆ. ಇಂದು ನಾಡಿನೆಲ್ಲೆಡೆ ಮಹರ್ಷಿ ಭಗೀರಥರ ಜನ್ಮ ದಿನವನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುವ ಮೂಲಕ ಅವರಿಗೆ ಗೌರವ ಸೂಚಿಸಲಾಗುತ್ತಿದೆ.ಅಲ್ಲದೆ ಸಣ್ಣ ಸಂಖ್ಯೆಯಲ್ಲಿರುವ ಆ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಇದಾಗಿದೆ. ಸರಕಾರ ನಿಗಮದ ಮೂಲಕ ನೀಡುವ ಎಲ್ಲಾ ಸವಲತ್ತುಗಳನ್ನು ಜನರು ಬಳಸಿಕೊಂಡು ಅರ್ಥಿಕವಾಗಿ,ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವಂತೆ ಶಾಸಕ ಡಾ.ರಫೀಕ್ ಅಹಮದ್ ಕರೆ ನೀಡಿದರು.

ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಮಾತನಾಡಿ,ಸರಕಾರ ಈಗಾಗಲೇ ಈ ಸಮುದಾಯದ ಅಭಿವೃದ್ಧಿಗೆ ಉಪ್ಪಾರ ಅಭಿವೃದ್ಧಿ ಮಂಡಳಿಯನ್ನು ಘೋಷಣೆ ಮಾಡಿದೆ.ಸರಕಾರಿ ಆದೇಶ ಬಂದ ಕೂಡಲೇ ನಿಗಮದ ಕಚೇರಿಗೆ ಅಗತ್ಯವಿರುವ ಕಟ್ಟಡ ಮತ್ತು ಸೂಕ್ತ ಸಿಬ್ಬಂದಿ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಟೂಡಾ ಸದಸ್ಯ ಆಟೋರಾಜು, ಕನ್ನಡ ಮತ್ತು ಸಂಸ್ಸತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪ್ಪಿನಕಟ್ಟೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News