ಸಿ.ಟಿ.ರವಿಯಿಂದ ಯಡಿಯೂರಪ್ಪಗೆ ಟಾಂಗ್
Update: 2017-05-02 23:09 IST
ಚಿಕ್ಕಮಗಳೂರು, ಮೇ 2: ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಆರೆಸ್ಸೆಸ್ ಮುಖಂಡ ಸಂತೋಷ ಪರವಾಗಿ ಬ್ಯಾಟಿಂಗ್ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ್ದಾರೆ.
ಸಂತೋಷ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರು. ಅವರು ರಾಷ್ಟ್ರಕ್ಕೆ ತಮ್ಮ ಬದುಕನ್ನು ಸಮರ್ಪಣೆ ಮಾಡಿಕೊಂಡವರು ಆಗಿದ್ದಾರೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ ಯಾರು ಆಗಬೇಕು ಎಂಬುದು ಪಕ್ಷದ ಹಿರಿಯರು, ಶಾಸಕರು ನಿರ್ಧಾರ ಮಾಡುತ್ತಾರೆ. ನಾವು ಯಾರೂ ತೀರ್ಮಾನ ಮಾಡಲು ಬರುವುದಿಲ್ಲ ಎಂದಿರುವ ಅವರು, ಸಂತೋಷ್ ಜೀ ದೇಶದ ಸರ್ವತೋಮುಖ ಅಭಿವೃದ್ಧಿಗೆ ಕಟಿ ಬದ್ಧವಾಗಿ ಶ್ರಮಿಸುತ್ತಿದ್ದಾರೆ.
ಅವರು ನಿಷ್ಠುರವಾಗಿ ಮಾತನಾಡುತ್ತಾರೆ. ನನ್ನ ವಿರುದ್ಧ್ದವೂ ನಿಷ್ಠುರವಾಗಿ ಮಾತನಾಡಿದ್ದಾರೆ. ಅವರ ಮೇಲಿನ ಆರೋಪಕ್ಕೆ ಯಾವ ರೀತಿಯ ಅರ್ಥವಿಲ್ಲ ಎಂದು ಶಾಸಕ ರವಿ ತಿಳಿಸಿದರು.