ಮಡಿಕೇರಿ: ನದಿಗೆ ಬಿದ್ದು ದಂಪತಿ ಸಾವು
Update: 2017-05-02 23:13 IST
ಮಡಿಕೇರಿ, ಮೇ 2:ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದು ಕಾರ್ಮಿಕ ದಂಪತಿಗಳು ನೀರು ಪಾಲಾದ ಘಟನೆ ಕಣ್ಣಂಗಾಲ ಗ್ರಾಮದ ಹಚ್ಚಿನಾಡುವಿನಲ್ಲಿ ನಡೆದಿದೆ.
ಹಚ್ಚಿನಾಡು ಗ್ರಾಮದ ತೋಟದ ಮಾಲಕರೊಬ್ಬರ ಲೈನ್ ಮನೆಯಲ್ಲಿ ವಾಸವಾಗಿದ್ದ ಕಾರ್ಮಿಕರಾದ ಪಣಿಯವರ್ ಚಿಣ್ಣು (50) ಹಾಗೂ ಆತನ ಪತ್ನಿ ಪಣಿಯವರ್ ಅಮ್ಮುಣಿ (43) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಕಾವೇರಿ ನದಿಯಲ್ಲಿ ಬಟ್ಟೆ ತೊಳೆಯುತ್ತಿದ್ದ ಅಮ್ಮುಣಿ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಳು ಎನ್ನಲಾಗಿದೆ.
ಈ ಸಂದರ್ಭ ಆಕೆಯನ್ನು ರಕ್ಷಣೆ ಮಾಡಲು ಹೋದ ಪತಿ ಚಿಣ್ಣು ಕೂಡ ನದಿ ಪಾಲಾಗಿದ್ದಾರೆ. ಮೃತದೇಹವನ್ನು ನದಿಯಿಂದ ಹೊರ ತೆಗೆಯಲಾಗಿದೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.