ಲಾರಿ ಢಿಕ್ಕಿ: ಬೈಕ್ ಸವಾರ ಮೃತ್ಯು
Update: 2017-05-03 23:08 IST
ಮಂಡ್ಯ, ಮೇ 3: ಲಾರಿ ಢಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಪಾಂಡವಪುರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಚಿಕ್ಕಮಸೀದಿ ಬಡಾವಣೆ ನಿವಾಸಿ ಲಕ್ಷ್ಮಣ್ ಶೆಟ್ಟಿ ಅವರ ಪುತ್ರ ಬಾಲಕೃಷ್ಣ ಅಪಘಾತದಲ್ಲಿ ಮೃತಪಟ್ಟವರು. ಬಾಲಕೃಷ್ಣ ಮತ್ತು ಸ್ನೇಹಿತ ಮೈಸೂರಿನ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಮಹಾರಾಷ್ಟ್ರ ಮೂಲಕ ಲಾರಿ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಬೈಕ್‌ನ ಹಿಂಬದಿ ಸವಾರ ಗಾಯಗೊಂಡಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.