×
Ad

ಭಟ್ಕಳ: ಕಾರ್ಮಿಕ ಮೃತ್ಯು

Update: 2017-05-03 23:15 IST

ಭಟ್ಕಳ, ಮೇ 3: ತಾಲೂಕಿನ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಜೀಕೇರಿ ಶೆಟ್ಟಿಕೇರಿ ಬಳಿ ಬಾವಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಆಯತಪ್ಪಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.


ತಾಲೂಕಿನ ಬೆಳಕೆಯ ಗಂಜೀಕೇರಿಯ ಶೆಟ್ಟಿಕೇರಿಯ ನಿವಾಸಿ ಕೃಷ್ಣ ನಾಯ್ಕ ಎಂಬವರ ಮನೆಯ ಬಾವಿ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕನೋರ್ವ ಕೆಲಸದ ಸಂದರ್ಭದಲ್ಲಿ ಆಯತಪ್ಪಿ ಬಾವಿಯಲ್ಲಿ ಬಿದ್ದ ರಭಸಕ್ಕೆ ಕಾರ್ಮಿಕನ ಕುತ್ತಿಗೆ ಮುರಿದಿದ್ದು, ವ್ಯಕ್ತಿಯ ರಕ್ತನಾಳವೂ ಸಹ ತುಂಡಾಗಿದೆ. ಮೃತ ದುರ್ದೈವಿ ಭಟ್ಕಳದ ಪಕ್ಕದ ತಾಲೂಕಾದ ಶಿರೂರಿನ ಹಣಬರಕೇರಿಯ ನಿವಾಸಿ ಬಚ್ಚ ಮಂಜಾ ಅಣಬಾರ(55) ಎಂದು ತಿಳಿದು ಬಂದಿದೆ.


ತಕ್ಷಣ ಮನೆಯ ಮಾಲಕ ಹಾಗೂ ಅಲ್ಲಿನ ಸಳೀಯರೆಲ್ಲ ಸೇರಿ ಕಾರ್ಮಿಕನನ್ನು ಬಾವಿಯಿಂದ ಹೊರತೆಗೆದು ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಭಟ್ಕಳ ತಾಲೂಕಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ಬಂದು ವೈದ್ಯರು ಪರೀಕ್ಷಿಸಿದಾಗ ಕಾರ್ಮಿಕ ಮೃತಪಟ್ಟಿರುವುದು ದೃಢಿಕರಿಸುತ್ತಾರೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News