ಆಯತಪ್ಪಿ ಬಾವಿಗೆ ಬಿದ್ದು ಕಾರ್ಮಿಕ ಮೃತ್ಯು
Update: 2017-05-03 23:28 IST
ಭಟ್ಕಳ, ಮೇ 3: ತಾಲೂಕಿನ ಬೆಳ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಜೀಕೇರಿ ಶೆಟ್ಟಿಕೇರಿ ಬಳಿ ಬಾವಿಯ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಆಯತ್ಪಪಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ತಾಲೂಕಿನ ಬೆಳಕೆಯ ಗಂಜೀಕೇರಿಯ ಶೆಟ್ಟಿಕೇರಿಯ ನಿವಾಸಿ ಕೃಷ್ಣ ನಾಯ್ಕ ಎನ್ನುವವರ ಮನೆಯ ಬಾವಿ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕ ಬಚ್ಚ ಮಂಜಾ ಅಣಬಾರ(55) ಕೆಲಸದ ಸಂದರ್ಭ ಆಯತಪ್ಪಿ ಬಾವಿಗೆ ಬಿದ್ದಿದ್ದಾರೆ. ಬಿದ್ದ ರಸಕ್ಕೆ ಕಾರ್ಮಿಕನ ಕುತ್ತಿಗೆ ಮುರಿದಿದ್ದು, ರಕ್ತನಾಳವೂ ತುಂಡಾಗಿದೆ.
ಮನೆಯ ಮಾಲಕ ಹಾಗೂ ಸ್ಥಳೀಯರು ತಕ್ಷಣ ಕಾರ್ಮಿಕನನ್ನು ಬಾವಿಯಿಂದ ಹೊರತೆಗೆದು ಭಟ್ಕಳ ತಾಲುಕು ಆಸ್ಪತ್ರೆಗೆ ಸಾಗಿಸಿದರೂ, ಮಂಜಾ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು.
ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.