×
Ad

ಬೈಕ್-ಮಿನಿಲಾರಿ ನಡುವೆ ಢಿಕ್ಕಿ: ಬೈಕ್ ಸವಾರ ಸಾವು

Update: 2017-05-04 22:54 IST

ಮುಂಡಗೋಡ, ಮೇ 4: ಬೈಕ್ ಮತ್ತು ಮಿನಿಲಾರಿ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಹುಬ್ಬಳ್ಳಿ-ಶಿರಸಿ ರಸ್ತೆಯ ಕಾವಲಕೊಪ್ಪ್ರಾಮದಲ್ಲಿ ಗುರವಾರ ಬೆಳಗ್ಗೆ ಸಂಭವಿಸಿದೆ.


   ಮೃತಪಟ್ಟ ಬೈಕ್ ಸವಾರನನ್ನು ಕಾತೂರ ಪಂಚಾಯತ್ ವ್ಯಾಪ್ತಿಯ ಮುಡಸಾಲಿ ಗ್ರಾಮದ ಮಂಜುನಾಥ ಹನಕನಳ್ಳಿ(30) ಎಂದು ಗುರುತಿಸಲಾಗಿದೆ. ಬೈಕ್ ಸಹ ಸವಾರ ಮಾಂತೇಶ ಜಾಧವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News