×
Ad

​ರೈಲಿನಲ್ಲಿ ಇಲೆಕ್ಟ್ರಾನಿಕ್ ವಸ್ತುಗಳ ಅಕ್ರಮ ಸಾಗಾಟ: ಆರೋಪಿಯ ಬಂಧನ

Update: 2017-05-04 22:56 IST

ಭಟ್ಕಳ, ಮೇ 4: ಮಂಗಳೂರು ರೈಲ್ವೆ ನಿಲ್ದಾಣದಿಂದ ಮಡಗಾಂವ್ ಕಡೆ ತೆರಳುವ ಪ್ಯಾಸೆಂಜರ್ ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ವೌಲ್ಯದ ಇಲೆಕ್ಟ್ರಾನಿಕ್ ವಸ್ತುಗಳನ್ನು ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ವಶಪಡಿಸಿಕೊಂಡಿರುವ ಭಟ್ಕಳ ರೈಲ್ವೆ ಪೊಲೀಸರು ಆರೋಪಿ ನಿಂಗಪ್ಪಯಮೂನಪ್ಪಛಲವಾದಿ ಎಂಬವನನ್ನು ಬಂಧಿಸಿದ್ದಾರೆ. ಎಂದಿನಂತೆ ಗುರುವಾರದಂದು ಮಂಗಳೂರು-ಮಡಗಾಂವ್ ಪ್ಯಾಸೆಂಜರ್ ರೈಲನ್ನು ಪರಿಶೀಲಿಸುವ ಸಂದರ್ಭದಲ್ಲಿ ಪ್ರಯಾಣಿಕನೋರ್ವನ ಮೇಲೆ ಸಂಶಯಗೊಂಡ ಭಟ್ಕಳ ರೈಲ್ವೆ ಪೊಲೀಸರು ತಪಾಸಣೆ ನಡೆಸಿದರು.


ತಪಾಸಣೆಯ ಸಂದರ್ಭದಲ್ಲಿ ಲಕ್ಷಾಂತರ ರೂ. ವ ೌಲ್ಯದ ವಿವಿಧ ಇಲೆಕ್ಟ್ರಾನಿಕ್ ವಸ್ತುಗಳನ್ನು ಕಳವು ಮಾಡಿ ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ. ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ನಿಂಗಪ್ಪಯಮೂನಪ್ಪಛಲವಾದಿ(23) ಎಂದು ಗುರುತಿಸ ಲಾಗಿದೆ. ಪೊಲೀ  ಸರು ಕೂಡಲೇ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿರುವ ವಸ್ತುಗಳು ಉಡುಪಿಯ ಕಲ್ಸಂಕದಲ್ಲಿನ ಗುತ್ತಿಗೆದಾರ ಸುರೇಶ ರಾವ್ ಎಂಬವರ ಮನೆಯಿಂದ ಕದ್ದಿರುವುದಾಗಿ ಬಾಯಿ ಬಿಟ್ಟಿದ್ದಾನೆ.

ಈ ಕುರಿತು ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ ಭಟ್ಕಳ ರೈಲ್ವೆ ಪೊಲೀಸರು ಆರೋಪಿಯನ್ನು ಉಡುಪಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News