×
Ad

​ಪ್ರತ್ಯೇಕ ಕಳ್ಳತನ ಪ್ರಕರಣ ದಾಖಲು

Update: 2017-05-04 22:58 IST

ಚಿಕ್ಕಮಗಳೂರು, ಮೇ 4: ತರೀಕೆರೆ ಮತ್ತು ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಕಳ್ಳತನ ನಡೆದಿದ್ದು, ಪ್ರಕರಣ ದಾಖಲಿಸಲಾಗಿದೆ.
ತರೀಕೆರೆ ಠಾಣೆ ವ್ಯಾಪ್ತಿಯ ಎಂ.ಸಿ.ಹಳ್ಳಿಯಲ್ಲಿ ತನ್ನ ಮನೆಯ ಎದುರು ನಿಲ್ಲಿಸಿದ್ದ ಹೀರೋ ಹೋಂಡಾ ಕಂಪೆನಿಯ ಕೆಎ 18, ಎಕ್ಸ್ 3786 ನಂಬರಿನ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಲಾಗಿದೆ. ಇದರ ವೌಲ್ಯ 20 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಭದ್ರಾ ಎಸ್ಟೇಟ್ ಕಾಫಿ ಕ್ಯೂರಿಂಗ್‌ನಲ್ಲಿ 60 ಕಾಫಿ ಬೀಜದ ಮೂಟೆಗಳನ್ನು ಇಟ್ಟಿದ್ದು, ಅವುಗಳಲ್ಲಿ 11 ಮೂಟೆಗಳನ್ನು ಕಳ್ಳತನ ಮಾಡಲಾಗಿದೆ. ಇದರ ವೌಲ್ಯ 1.45 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News