ಚಿಕ್ಕಮಗಳೂರು: ಬಾಲಕ ನಾಪತ್ತೆ
Update: 2017-05-04 23:02 IST
ಚಿಕ್ಕಮಗಳೂರು, ಮೇ 4: ಚಿಕ್ಕಮಗಳೂರು ಜಿಲ್ಲೆ ಲಕ್ಯಾ ಹೋಬಳಿ ಪಾದಮನೆ ಗ್ರಾಮದಲ್ಲಿ ಕಬ್ಬು ಕಡಿಯಲು ಬಂದ ಕುಟುಂಬದಲ್ಲಿದ್ದ ಬಾಲಕ ಗಣೇಶ (6) ಕಾಣೆಯಾಗಿದ್ದಾನೆ. ಬಾಲಕ ತಮಿಳು ಭಾಷೆ ಮಾತನಾಡುತ್ತಾನೆ. ಈತನ ಗುರುತು ಸಿಕ್ಕಿದ್ದಲ್ಲಿ ಕೂಡಲೇ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್‌ಗೆ ಮಾಹಿತಿ ನೀಡುವಂತೆ ಕೋರಿದೆ. ಕಾಣೆಯಾದ ಬಾಲಕನ ಬಗ್ಗೆ ಯವುದೇ ಉಪಯುಕ್ತ ಮಾಹಿತಿ ನೀಡಿದವರಿಗೆ ರೂ. 10,000 ಬಹುಮಾನವನ್ನು ನೀಡುವುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.
ಸಖರಾಯಪಟ್ಟಣ ಪೊಲೀಸ್ ಠಾಣೆ 9480805138/9480805168, 08267-244044/08267-222266, ಪೊಲೀಸ್ ಕಂಟ್ರೋಲ್ ರೂಮ್‌ಗೆ 9480805100, 08262-235608/230540, ಅಥವಾ ಹುಡುಗನ ಪೋಷಕರು 9663793374 (ಲಕ್ಷ್ಮೀ), 8546815625(ಪುಷ್ಪಾ)ಅವರನ್ನು ಸಂಪರ್ಕಿಸಬಹುದು ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.