ಜೂಜಾಟ: 39 ಮಂದಿ ವಶ; ಜಿಲ್ಲಾ ಡಿಸಿಬಿ ಪೊಲೀಸರ ದಾಳಿ
Update: 2017-05-04 23:03 IST
ಸೊರಬ, ಮೇ 4: ಪಟ್ಟಣದ ಜನತಾ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಮೇಲೆ ಖಚಿತ ಮಾಹಿತಿಯ ಮೇರೆಗೆ ಶಿವಮೊಗ್ಗ ಜಿಲ್ಲಾ ಡಿಸಿಬಿ ಪೊಲೀಸರು ದಾಳಿ ನಡೆಸಿ ಇಸ್ಪೀಟ್ ಆಡುತ್ತಿದ್ದ 39 ಜನರನ್ನು ಪೊಲೀಸರು ಬಂಧಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಮಾರ್ಗದರ್ಶನದಲ್ಲಿ ಎಎಸ್ಪಿ ಮುತ್ತುರಾಜ್, ಡಿವೈಎಸ್ಪಿ ಪಂಪಾಪತಿ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಡಿಸಿಬಿ ಇನ್ ಸ್ಪೆಕ್ಟರ್ ಕುಮಾರ್, ಡಿಸಿಐಬಿಯ ಚಂದ್ರಶೇಖರ್, ಡಿಎಸ್‌ಬಿಯ ಮುತ್ತಣ್ಣಗೌಡ ಹಾಗೂ ಸಬ್‌ಇನ್ ಸ್ಪೆಕ್ಟರ್ ಉಮೇಶ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.ಬಂಧಿತರಿಂದ 2.65 ಲಕ್ಷ ರೂ.ನಗದು ಹಾಗೂ 37ಮೊಬೈಲ್, 20 ಬೈಕ್, 5 ಕಾರುಗಳನ್ನು ವಶಕ್ಕೆ ಪಡೆದು ಡಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.