×
Ad

ಬಿಜೆಪಿ ಕಾರ್ಯಕಾರಿಣಿಗೆ ಸಂತೋಷ್ ಗೈರು

Update: 2017-05-06 12:12 IST

ಮೈಸೂರು, ಮೇ 6: ಬಿಜೆಪಿಯ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿಗೆ ಸಭೆಗೆ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಗೈರು ಹಾಜರಾಗಿದ್ದಾರೆ.

ಸಂತೋಷ್‌ರನ್ನು ಸಭೆಯಿಂದ ಬದಿಗೆ ಸರಿಸಲಾಗಿದೆ. ಸಂತೋಷ್ ಈತನಕ ನಡೆದಿರುವ ಬಿಜೆಪಿಯ ಎಲ್ಲ ಸಭೆ-ಸಮಾರಂಭಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಬಿಜೆಪಿ ಕಾರ್ಯಕರ್ತರು ಸಭೆ ನಡೆಯುತ್ತಿರುವ ಸ್ಥಳದ ಸುತ್ತಮುತ್ತ ಹಾಕಲಾಗಿದ್ದ ಸಂತೋಷ್ ಹೆಸರಿದ್ದ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿದರು.

ಮುಖನೋಡಿಕೊಳ್ಳದ ಬಿಎಸ್‌ವೈ-ಈಶ್ವರಪ್ಪ

ಪಕ್ಷದ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಆಸೀನರಾಗಿದ್ದರೂ ಪರಸ್ಪರ ಮುಖ ನೋಡಿಕೊಳ್ಳದೇ ಕುಳಿತ್ತಿದ್ದರು. ಈಶ್ವರಪ್ಪ ಸಭೆಗೆ ಬಂದ ತಕ್ಷಣ ಬಿಎಸ್‌ವೈಗೆ ನಮಸ್ಕರಿಸಿದರು. ಆದರೆ ಯಡಿಯೂರಪ್ಪ ಅವರು ಈಶ್ವರಪ್ಪರನ್ನು ಕಣ್ಣೆತ್ತಿಯೂ ನೋಡಲಿಲ್ಲ.

ಸಭೆ ಆರಂಭಕ್ಕೆ ಮೊದಲು ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಎಲ್ಲರೂ ಎದ್ದು ನಿಂತು ಗೌರವ ನೀಡಿದರೆ, ಈಶ್ವರಪ್ಪ ಕುರ್ಚಿಯಲ್ಲೇ ಆಸೀನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News