ಬಾಗೇಪಲ್ಲಿ: ಕನ್ನಡ ಸಾಹಿತ್ಯ ಪರಿಷತ್ 102ನೇ ಸಂಸ್ಥಾಪನಾ ದಿನಾಚರಣೆ

Update: 2017-05-06 11:47 GMT

ಬಾಗೇಪಲ್ಲಿ, ಮೇ 6: ನಗರದ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 102ನೇ ಸಂಸ್ಥಾಪನಾ ದಿನಾಚರಣೆ ನಡೆಯಿತು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎ.ಜಿ.ಸುಧಾಕರ್ ಮಾತನಾಡಿ, ಆಂಧ್ರಪ್ರದೇಶದ ಗಡಿ ಪ್ರದೇಶದಲ್ಲಿ ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಸೇರಿದಂತೆ ಕನ್ನಡ ವಾತಾವರಣ ಬೆಳೆಸಿ ಉಳಿಸಲು ಪ್ರತಿ ಬುಧವಾರ ಮನೆಗಳಲ್ಲಿ , ಗ್ರಾಮೀಣ ಪ್ರದೇಶಗಳಲ್ಲಿ ಮನೆಯಂಗಳದಲ್ಲಿ ಕನ್ನಡ ನುಡಿಸಿರಿ ಕಾರ್ಯಕ್ರಮ ನಡೆಯುತ್ತಿದೆ. ಪ್ರಾಚೀನ ಕಾಲದ ಕನ್ನಡ ಭಾಷೆಗೆ ತನ್ನದೇ ಆದ ಮಹತ್ವ ಇದೆ. ಈ ನಿಟ್ಟಿನಲ್ಲಿ 102 ವರ್ಷಗಳಿಂದ ಕರ್ನಾಟಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಉಳಿಸಿಕೊಂಡು ಬಂದಿದೆ. ಅನೇಕ ಕಾರ್ಯಕ್ರಮಗಳ ಮೂಲಕ ಕನ್ನಡ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.

ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕ ಡಾ.ರಾಮಯ್ಯ ಮಾತನಾಡಿ, ಬಹಳ ಪ್ರಾಚೀನವಾದ ಕನ್ನಡ ಭಾಷೆಗೆ ಮಹತ್ವ ಇದೆ. ರಾಜಮಹಾರಾಜರ ಕಾಲದಿಂದಲೂ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಅವಿನಾಭಾವ ಸಂಬಂಧ ಇದೆ. ಮಾತನಾಡುವ ಪದಗಳಿಗೆ ಒಂದಕ್ಕೊಂದು ಹೋಲಿಕೆ ಇದೆ. ಆದರೆ ಇತರ ಭಾಷೆಗಳಿಗಿಂತ ಕನ್ನಡ ಭಾಷೆಯ ಪದಗಳು ಮಾತನಾಡಲು ಬಹಳ ಸೊಗಸಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಾಮಯ್ಯ, ಕನ್ನಡ ಕಲಾ ಸಂಘ ಅಧ್ಯಕ್ಷ ಪಿ.ಎಸ್.ರಾಜೇಶ್, ಶಿಕ್ಷಕರಾದ ಜಿ.ವಿ.ಚಂದ್ರಶೇಖರ್, ಮಂಜುನಾಥ್, ಮ.ಅ.ಶ್ರೀನಿವಾಸತಂತ್ರಿ ಶಿಕ್ಷಕಿಯರಾದ ಧರ್ಮಪುತ್ರಿ, ಪದ್ಮಾವತಿ, ಸಾಕ್ಷರತಾ ಅಧಿಕಾರಿ ಶಿವಪ್ಪ, ಕರವೇ ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್, ಮುಖಂಡ ಝಬೀವುಲ್ಲಾ, ಎಕ್ಸ್‌ಪರ್ಟ್ ಪಿಯು ಕಾಲೇಜಿನ ಮುಖ್ಯಸ್ಥ ಶ್ರೀನಿವಾಸ್(ಜಿನ್ನಿ), ಉಪಪ್ರಾಂಶುಪಾಲರಾದ ಪದ್ಮ ಉಪನ್ಯಾಸಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News