×
Ad

ಬಾಲ ಮಂದಿರದಿಂದ ಬಾಲಕ ನಾಪತ್ತೆ

Update: 2017-05-06 17:32 IST

ಚಿಕ್ಕಮಗಳೂರು, ಮೇ.6: ನಗರದ ಬಾಲ ಮಂದಿರದಿಂದ ಬಾಲಕನೋರ್ವ ಕಾಣೆಯಾಗಿರುವ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಾಪತ್ತೆಯಾದ ಬಾಲಕನನ್ನು ಜಗದ್ಗುರು(15) ಎಂದು ಗುರುತಿಸಲಾಗಿದೆ. ಬಾಲಮಂದಿರದ ಮಕ್ಕಳನ್ನು ಮೈದಾನಕ್ಕೆ ಆಟವಾಡಲು ಕರೆದೊಯ್ದಾಗ ಸಿಬ್ಬಂದಿಯಿಂದ ತಪ್ಪಿಸಿದ್ದ ಜಗದ್ಗುರು ನಂತರ ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News