×
Ad

ಪದವೀಧರರ ಮೇಲೆ ಸಾಮಾಜಿಕ ಜವಾಬ್ದಾರಿಯಿದೆ: ಡಾ.ಆನಂದ ವಿ. ಶಿವಪುರ

Update: 2017-05-06 19:27 IST

ಭಟ್ಕಳ, ಮೇ 6: ಇಲ್ಲಿನ ಅಂಜುಮಾನ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನ ಪದವಿ ಪ್ರದಾನ ಕಾರ್ಯಕ್ರಮವು ಸಂಸ್ಥೆಯ ಅಧ್ಯಕ್ಷ ಅಬ್ದುರ್ರಹ್ಮಾನ್ ಜುಕಾಕು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿ.ಟಿ.ಯು. ಬೆಳಗಾವಿಯ ಡಾ.ಆನಂದ ವಿ. ಶಿವಪುರ, ಪದವಿ ಪ್ರದಾನ ಸಮಾರಂಭ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ಹಬ್ಬದ ವಾತಾವರಣವಾಗಿದೆ. ಇಲ್ಲಿಯವರೆಗೆ ವಿದ್ಯಾರ್ಥಿಗಳಾಗಿದ್ದವರು, ಇನ್ನು ಮುಂದೆ ಪದವೀಧರರಾಗಲಿದ್ದು, ಸಾಮಾಜಿಕ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಇಂದು ಇಂಜಿನಿಯರಿಂಗ್ ಪದವೀಧರರ ಜವಾಬ್ದಾರಿ ಹೆಚ್ಚಿದೆ. ಗುರಿ ಸಾಧನೆಗೆ ಹಲವಾರು ಏಳು-ಬೀಳುಗಳು ಸಾಮಾನ್ಯವಾಗಿದ್ದರೂ ಛಲಬಿಡದೆ ಮುನ್ನುಗ್ಗಿದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.

ಜಮಾತುಲ್ ಮುಸ್ಲಿಮೀನ್‌ನ ಮಾಜಿ ಅಧ್ಯಕ್ಷ ಹಾಗೂ ಜಾನ್ ಬ್ರದರ್ಸ್‌ ನಿರ್ದೇಶಕ ಮೊಹತೆಶಂ ಅಬ್ದುರ್ರಹ್ಮಾನ್ ಮಾತನಾಡಿ, ವಿದ್ಯಾರ್ಥಿ ಜೀವನದಿಂದ ಸಾಮಾಜಿಕ ಜೀವನಕ್ಕೆ ಕಾಲಿಟ್ಟ ಪದವೀಧರರು ಸಮಾಜದ ಒಳಿತನ್ನೇ ಬಯಸಬೇಕು. ಪ್ರತಿಯೋರ್ವರೂ ಕೂಡಾ ಸಮಾಜಮುಖಿಯಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಅಂಜುಮಾನ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಇಸ್ಮಾಯಿಲ್, ಕಾಲೇಜ್ ಬೋರ್ಡ್ ನಿರ್ದೇಶಕ ಡಾ. ಉದಯಪ್ರಸನ್ನ, ಉಪಪ್ರಾಂಶುಪಾಲ ಪ್ರೊ. ಎಚ್.ಎಂ.ಪಾಲಚಂದ್ರ, ಪ್ರೊ. ಟಿ.ಎನ್.ಪಿ. ರಾಜಕುಮಾರ್, ಪ್ರೊ. ಅನಿಲ್ ಕಡ್ಲೆ, ಪ್ರೊ. ಜಾಹಿದ್ ಖರೂರಿ, ಡಾ. ಕೆ.ಫಝ್ಲುರ್ರಹ್ಮಾನ್ ಮುಂತಾದವರು ಉಪಸ್ಥಿತರಿದ್ದರು.

ಎಂ.ಬಿ.ಎ. ಮತ್ತು ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಉತ್ತೀರ್ಣರಾದವರಿಗೆ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು.

ಅಲಿ ಮರ್ತುಜಾ ಖಾಜಿಯಾ ಕುರ್ ಆನ್ ಪಠಿಸಿದರು. ಪ್ರಾಂಶುಪಾಲ ಡಾ. ಮುಷ್ತಾಕ್ ಅಹಮ್ಮದ್ ಬಾವಿಕಟ್ಟಿ ಸ್ವಾಗತಿಸಿದರು. ಡಾ. ಅನಂತಮೂರ್ತಿ ಶಾಸ್ತ್ರಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಶ್ರೀಧರ ಯಲ್ಲೂರ್‌ಕರ್ ವಂದಿಸಿದರು. ಪ್ರೊ. ಸುಬ್ರಹ್ಮಣ್ಯ ಭಾಗವತ್, ಪ್ರೊ. ಮಿರ್ಜಾ ನಾಯ್ಕ ಮುಂತಾದವರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News