"32 ವೇಸ್ ಟು ಲೀಡ್ ಸ್ಮಾರ್ಟ್ ಲೈಫ್" ಇ-ಪುಸ್ತಕ ಬಿಡುಗಡೆ
ಭಟ್ಕಳ, ಮೇ 7: ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನ ಉಪನ್ಯಾಸಕರು, ರ್ಯಾಂಕ ವಿಜೇತರು ಹಾಗೂ ವಿದ್ಯಾರ್ಥಿಗಳು ರಚಿಸಿದ "32 ವೇಸ್ ಟು ಲೀಡ್ ಸ್ಮಾರ್ಟ್ ಲೈಫ್" ಎಂಬ ವಿದ್ಯುನ್ಮಾನ ಇ-ಪುಸ್ತಕವನ್ನು ಬೆಂಗಳೂರಿನ ವಿವಿಧ್ ಸ್ಪೇಸ್ ಕಂಪನಿಯ ಪ್ರಧಾನ ತಂತ್ರಜ್ಞರಾದ ವಿನಾಯಕ ಶಾನಭಾಗ ಬಿಡುಗಡೆಗೊಳಿಸಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ನಾಗೇಶ ಭಟ್, ಉಪ ಪ್ರಾಂಶುಪಾಲ ಶ್ರೀನಾಥ ಪೈ, ಉಪನ್ಯಾಸಕರಾದ ಸುಬ್ರಮಣ್ಯ ನಾಯ್ಕ, ವಿಖ್ಯಾತ ಪ್ರಭು, ಪಣಿಯಪ್ಪಯ್ಯ ಹೆಬ್ಬಾರ, ವಿಘ್ನೇಶ ಪ್ರಭು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
32 ಲೇಖಕರು ರಚಿಸಿದ 32 ವಿಷಯಗಳನ್ನು ಈ ಪಿ.ಡಿ.ಎಫ್. ಪುಸ್ತಕ ಹೊಂದಿದ್ದು, ಕೇಂದ್ರ, ರಾಜ್ಯ ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು ಜನಸಾಮಾನ್ಯರಿಗಾಗಿ ನೀಡುವ ಮೌಲ್ಯವರ್ಧಿತ ಸೇವೆಗಳ ಸದ್ಬಳಕೆಯ ಸಚಿತ್ರ ಮಾಹಿತಿಯನ್ನು ಹೊಂದಿದೆ. ಮೊಬೈಲ್, ಟ್ಯಾಬ್ಲೇಟ್, ನೋಟ್ ಪ್ಯಾಡ್ ಗಳಲ್ಲಿ ಈ ಪುಸ್ತಕವನ್ನು ಉಚಿತವಾಗಿ ಓದುಬಹುದಾಗಿದೆ.