ಸಿಡಿಲು ಬಡಿದು ಸಿಲಿಂಡರ್ ಸ್ಫೋಟ: ಮನೆ ಭಸ್ಮ

Update: 2017-05-08 12:49 GMT

ಗುಂಡ್ಲುಪೇಟೆ, ಮೇ 8: ಸಿಡಿಲು ಬಡಿದು ಮನೆಯೊಂದು ಭಸ್ಮವಾಗಿರುವ ಘಟನೆ ತಾಲೂಕಿನ ಚೆನ್ನಮಲ್ಲಿಪುರ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಚೆನ್ನಮಲ್ಲಿಪುರ ಗ್ರಾಮದ ಗಿರಿಯಪ್ಪರ ಪತ್ನಿ ನಂದ ಎಂಬವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಭಾರೀ ಸಿಡಿಲಿಗೆ ಮನೆಯೊಳಗಿದ್ದ ಸಿಲಿಂಡರ್ ಸ್ಫೋಟಗೊಂಡು ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಭಸ್ಮಗೊಂಡಿವೆ.

ಗ್ರಾಮದ ಹೊರವಲಯದ ಜಮೀನಿನಲ್ಲಿ ನಂದಾ ವಾಸವಾಗಿದ್ದು, ರವಿವಾರ ರಾತ್ರಿ ಸಿಡಿಲುಬಡಿದು ಮನೆಯೊಳಗಿದ್ದ ಸಿಲಿಂಡರ್ ಸ್ಫೋಟಗೊಂಡಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಪ್ರಾಣಹಾನಿ ಸಂಭವಿಸಿಲ್ಲ. ಕೃಷಿಗೆ ಸಂಬಂಧಿಸಿದ ಡ್ರಿಪ್ ಪದಾರ್ಥಗಳಾದ ಲ್ಯಾಟರ್, ಪೈಪ್, ಸ್ಪಿಂಕ್ಲರ್‌ ಸೆಟ್ ಹಾಗೂ ಬೆಲೆಬಾಳುವ ಮರದ ಸಾಮಗ್ರಿಗಳು ನಾಶವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News