ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಜೂ.5ಕ್ಕೆ ವಿಚಾರಣೆ ಮುಂದೂಡಿಕೆ

Update: 2017-05-08 13:11 GMT

ಮಡಿಕೇರಿ, ಮೇ 8: ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣದ ಕುರಿತಂತೆ ಗಣಪತಿ ಕುಟುಂಬಸ್ಥರ ವಿಚಾರಣೆ ಮತ್ತು ಸ್ಪಷ್ಟೀಕರಣ ಪಡೆಯುವ ಹಿನ್ನೆಲೆಯಲ್ಲಿ ನಗರದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ (ಜೂನಿಯರ್ ಡಿವಿಷನ್) ಮತ್ತು ಜೆಎಂಎಫ್ ಸಿ ನ್ಯಾಯಾಲಯ ಪ್ರಕರಣವನ್ನು ಜೂನ್ 5ಕ್ಕೆ ಮುಂದೂಡಿದೆ.

ಎ.10 ರಂದು ನ್ಯಾಯಾಲಯವು ಡಿವೈಎಸ್‌ಪಿ ಗಣಪತಿ ಅವರ ತಂದೆ ತಂದೆ ಕುಶಾಲಪ್ಪ, ತಾಯಿ ಪೊನ್ನಮ್ಮ, ಸಹೋದರ ಮಾಚಯ್ಯ ಮತ್ತು ಸಹೋದರಿ ಸಬಿತಾ ಅವರಿಗೆ ಸಿಐಡಿ ವರದಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಐದು ದಿನಗಳ ಕಾಲಾವಕಾಶವನ್ನು ವಿಸ್ತರಿಸಿತ್ತು. ಅದರಂತೆ ಎ.15 ರಂದು ಗಣಪತಿ ಅವರ ಕುಟುಂಬಸ್ಥರ ಪರವಾಗಿ ವಕೀಲ ಪವನ್ ಕುಮಾರ್ ಶೆಟ್ಟಿ ತಮ್ಮ ವಾದವನ್ನು ಮಂಡಿಸಿದ್ದರು. ಬಳಿಕ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು.

ಡಿವೈಎಸ್‌ಪಿ ಗಣಪತಿ ಪ್ರಕರಣದಲ್ಲಿ ಮತ್ತೆ ಕುಟುಂಬಸ್ಥರು ಯಾಕಾಗಿ ದೂರುದಾರರಾಗಿ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನುವುದು ಸೇರಿದಂತೆ ವಿವಿಧ ವಿಚಾರಗಳ ಸ್ಪಷ್ಟೀಕರಣವನ್ನು ಪಡೆಯುವ ಸಲುವಾಗಿ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಜೂ.5ಕ್ಕೆ ಮುಂದೂಡಿ ಆದೇಶ ನೀಡಿದೆ.

ಈ ಸಂದರ್ಭ ಡಿವೈಎಸ್‌ಪಿ ಗಣಪತಿ ಅವರ ಸಹೋದರ ಮಾಚಯ್ಯ ಹಾಗೂ ವಕೀಲರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News