ಹುಲ್ಲಿನ ಬಣವಿಗೆ ಬೆಂಕಿ: ಅಪಾರ ಹಾನಿ
Update: 2017-05-08 22:47 IST
ಮುಂಡಗೋಡ, ಮೇ 8: ಮೇವಿಗಾಗಿ ಇಟ್ಟಿದ್ದ ಹುಲ್ಲಿಗೆ ಆಕಸ್ಮಿಕ ಬೆಂಕಿತಗುಲಿ ಸುಮಾರು 1 ಲಕ್ಷ ರೂ. ಅಧಿಕ ವೌಲ್ಯದ ಹುಲ್ಲು ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಗಣಪತಿ ಹುಲಿಯಪ್ಪಟಿಕೋಜಿ ಎಂಬವರು ತನ್ನ ಮನೆಯ ಹಿಂಭಾಗದಲ್ಲಿ ಜಾನುವಾರುಗಳ ಮೇವಿಗಾಗಿ ಶೇಖರಿಸಿಟ್ಟಿದ್ದ ಹುಲ್ಲಿಗೆ ಇಂದು ಸಂಜೆಯ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ವಿಷಯ ತಿಳಿಯುತ್ತಿದ್ದಂತೆ ಮುಂಡಗೋಡ ಅಗ್ನಿ ಶಾಮಕ ದಳ ಬೆಂಕಿ ಆರಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ