×
Ad

ಚಿತ್ರದುರ್ಗ: ಸಿಡಿಲು ಬಡಿದು ಮೂವರು ಮೃತ್ಯು

Update: 2017-05-09 19:45 IST
ಸಾಂದರ್ಭಿಕ ಚಿತ್ರ

ಚಿತ್ರದುರ್ಗ, ಮೇ 9: ಹಿರಿಯೂರು ವಾಣಿವಿಳಾಸ ಕೆರೆಯಲ್ಲಿ ಸ್ಥಾನ ಮಾಡುತ್ತಿದ್ದ ವೇಳೆ ಮೂವರಿಗೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.

ಮೃತರನ್ನು ಕುರುಬರಹಳ್ಳಿ ನಿವಾಸಿಗಳಾದ ಉಪನ್ಯಾಸಕ ವೃತ್ತಿ ಮಾಡುತ್ತಿರುವ ಮಲ್ಲೇಶ್ ನಾಯಕ್ (30), ಶಿಕ್ಷಕ ಛಾಯಾಪತಿ (29) ಹಾಗೂ ಕಾರು ಚಾಲಕ ಹರೀಶ್ (27) ವರ್ಷ ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಸಹೋದ್ಯೋಗಿಗಳಾಗಿರುವ ಒಟ್ಟು ಒಂಬತ್ತು ಮಂದಿ ಶಿಕ್ಷಕರು ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಚಿತ್ರದುರ್ಗ ತಾಲೂಕಿನ ಹಿರಿಯೂರು ವಾಣಿವಿಳಾಸ ಕೆರೆಗೆ ವಿಹಾರಕ್ಕೆಂದು ಬಂದಿದ್ದರು.

ಈ ವೇಳೆ ಗುಡುಗು ಸಹಿತ ಮಳೆಯಾಗುತ್ತಿದ್ದ ಕಾರಣ ಸ್ನೇಹಿತರಾದ ಮಲ್ಲೇಶ್ ನಾಯಕ್, ಛಾಯಾಪತಿ ಮತ್ತು ಕಾರು ಚಾಲಕ ಹರೀಶ್ ಕೆರೆಯಲ್ಲಿ ಸ್ಥಾನ ಮಾಡುತ್ತಿದ್ದರು. ಈ ವೇಳೆ ನೀರಿಗೆ ಸಿಡಿಲು ಬಡಿದ ಪರಿಣಾಮ ಸ್ಥಾನ ಮಾಡುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಉಳಿದ 6 ಮಂದಿ ನೀರಿಗೆ ಇಳಿಯದಿದ್ದ ಕಾರಣ ವರಿಗೆ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

 ಈ ಸಂಬಂಧ ಚಿತ್ರದುರ್ಗ ಪೊಲೀಸರು ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News