×
Ad

ದರೋಡೆಗೆ ಸಂಚು: ಐವರ ಬಂಧನ

Update: 2017-05-09 21:20 IST

ಬೆಂಗಳೂರು, ಮೇ 9: ಬೈಕ್‌ನಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಹೊಂಚು ಹಾಕಿದ್ದ ಆರೋಪದ ಮೇಲೆ ಐವರನ್ನು ಇಲ್ಲಿನ ಚಾಮರಾಜಪೇಟೆ ಠಾಣಾ ಪೊಲೀಸರು ಬಂದಿದ್ದಾರೆ.

ಬಂಧಿತ ಆರೋಪಿಗಳನ್ನು ಚಾಮರಾಜಪೇಟೆಯ 2ನೆ ಅಡ್ಡರಸ್ತೆಯ ಯತೀಶ್(19), ಮಂಜುನಾಥ(19), ಮೈಸೂರು ರಸ್ತೆ ಅಂಚೆಪಾಳ್ಯದ ಸೂರ್ಯ(19), ಗಿರೀಶ್(20), ಕೆಂಪೇಗೌಡ ನಗರದ ಗಣೇಶ್ ಶಾಸ್ತ್ರಿ(20) ಎಂದು ಗುರುತಿಸಲಾಗಿದೆ.

ಆರೋಪಿಗಳಲ್ಲಿ ಯತೀಶ್ ಹಾಗೂ ಸೂರ್ಯ ಒಂಟಿಯಾಗಿ ಓಡಾಡುವವರ ಮೊಬೈಲ್, ಇನ್ನ್ನಿತರ ಬೆಲೆಬಾಳುವ ವಸ್ತುಗಳನ್ನು ಕಸಿದು ಪರಾರಿಯಾಗಲು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ನಾಲ್ಕು ಬೈಕ್‌ಗಳಲ್ಲಿ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.

ಹನುಮಂತನಗರ, ಕೆಂಪೇಗೌಡ ನಗರ, ಮೈಕೋ ಲೇಔಟ್, ಕೋಣನಕುಂಟೆ, ಬ್ಯಾಟರಾಯನಪುರ, ಬಸವನಗುಡಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ 12 ಕಳವು ಪ್ರಕರಣಗಳು ಆರೋಪಿಗಳ ಬಂಧನದಿಂದ ಪತ್ತೆಯಾಗಿವೆ. ಇನ್ನು ಪ್ರಕರಣದಲ್ಲಿ ಬಂಧಿತರ ಜತೆಗಿದ್ದ ವಿನೋದ್ ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ 5 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ.ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News