×
Ad

ಇಂದು ಸಾಮೂಹಿಕ ವಿವಾಹ

Update: 2017-05-09 22:42 IST

ಮೂಡಿಗೆರೆ, ಮೇ 9: ಪಟ್ಟಣದ ದಿ. ಡಾ.ಪಿ.ಎ.ಅಡ್ಯಂತಾಯ ಸ್ಮಾರಕ ರಂಗ ಮಂದಿರದ ಆವರಣದಲ್ಲಿ ‘ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಸರಳ ಸಾಮೂಹಿಕ ಮದುವೆ ಮತ್ತು ಸಂಸ್ಕೃತಿ ಸಡಗರ-2017’ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಯ ಸಾಮಾಜಿಕ ಸೇವಾಸಂಸ್ಥೆಯ ಎಚ್.ಪಿ. ರಮೇಶ್ ತಿಳಿಸಿದ್ದಾರೆ.


 ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಸಂಸ್ಥೆಯಿಂದ ಅಂಬೇಡ್ಕರ್ ಜನ್ಮ ದಿನಾಚರಣೆ ಸಮಿತಿ, ಆಶ್ರಯ ಸಾಮಾಜಿಕ ಸೇವಾಸಂಸ್ಥೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ದಲ್ಲಿ ಎಮ್ಮೆಲ್ಸಿ ಡಾ.ಮೋಟಮ್ಮ ಅಧ್ಯಕ್ಷತೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್‌ರ 126ನೆ ಜನ್ಮ ದಿನಾಚರಣೆ ಹಮಿಕೊಳ್ಳಲಾಗಿದೆ.
  ಇದರ ಅಂಗವಾಗಿ ಸರಳ ಸಾಂಪ್ರದಾಯಿಕ ಮಂತ್ರಮಾಂಗಲ್ಯದೊಂದಿಗೆ ಸೀಮಿತ 30 ಜೋಡಿಗಳಿಗೆ ಸರಳ ಸಾಮೂಹಿಕ ಮದುವೆ ಹಾಗೂ ಸಂಸ್ಕೃತಿ ಸಡಗರ-2017 ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಗುವುದು.

ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಸಿದ್ಧ ಜಾನಪದ ತಂಡಗಳು ಕಾರ್ಯ ಕ್ರಮದಲ್ಲಿ ಭಾಗವಹಿಸಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News