×
Ad

ನಾಳೆ ಪಿಯುಸಿ ಫಲಿತಾಂಶ

Update: 2017-05-10 21:28 IST

ಬೆಂಗಳೂರು, ಮೇ 10: ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ನಾಳೆ (ಗುರುವಾರ) ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ನಲ್ಲಿ ಪ್ರಕಟಗೊಳ್ಳಲಿದೆ.

ಗುರುವಾರ ಮಧ್ಯಾಹ್ನ 3 ಗಂಟೆಗೆ ಸರಕಾರದ ಅಧಿಕೃತ ವೆಬ್‌ಸೈಟ್ http://www.pue.kar.nic.in ಹಾಗೂ http://karresults.nic.in ನಲ್ಲಿ ಫಲಿತಾಂಶ ದೊರೆಯಲಿದೆ, ಮೇ 12 ರಂದು ಕಾಲೇಜುಗಳಲ್ಲಿ ಪ್ರಕಟಿಸಲಾಗುವುದು ಎಂದು ಇಲಾಖೆು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ರಾಜ್ಯದ 998 ಕೇಂದ್ರದಲ್ಲಿ ನಡೆದ ಪಿಯು ಪರೀಕ್ಷೆಯಲ್ಲಿ 6,84,440 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ 3,48,562 ವಿದ್ಯಾರ್ಥಿ ಹಾಗೂ 3,35,909 ವಿದ್ಯಾರ್ಥಿನಿಯರು ಸೇರಿದಂತೆ 19 ತೃತೀಯ ಲಿಂಗಿಗಳು ಪರೀಕ್ಷೆಯನ್ನು ಬರೆದಿದ್ದು, ಇಂದು ಈ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಮೇ 12 ರಂದು  ಎಸೆಸೆಲ್ಸಿ ಫಲಿತಾಂಶ

ಎಸೆಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಮೇ 12 ರಂದು ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಗೂ 13ಕ್ಕೆ ಶಾಲೆಗಳಲ್ಲಿ ಪ್ರಕಟಿಸಲಾಗುವುದು ಎಂದು ಸಾರ್ವಜನಿಕರ ಶಿಕ್ಷಣ ಇಲಾಖೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News