ಮನೆ ಕಳವು: ದೂರು
Update: 2017-05-10 22:47 IST
ಚಿಕ್ಕಮಗಳೂರು, ಮೇ 10: ನಗರದ ಜಯನಗರ ಬಡಾವಣೆ ಯಲ್ಲಿ ಮನೆಗೆ ನುಗ್ಗಿ ಒಡವೆ ಕಳ್ಳತನ ಮಾಡಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಯನಗರ ಬಡಾವಣೆಯ ಲತೇಶ್‌ಗೌಡ ಎಂಬವರಿಗೆ ಸೇರಿದ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ. ಲತೇಶ್‌ಗೌಡ ಆಲ್ದೂರಿಗೆ ಮೇ 1ರಂದು ಕಾರ್ಯದ ನಿಮಿತ್ತ ತೆರಳಿದ್ದು, ಮೇ 8ರಂದು ವಾಪಸ್ ಬಂದಾಗ ಕಳ್ಳತನ ಕೃತ್ಯ ಪತ್ತೆಯಾಗಿದೆ. ಮನೆಯ ಲಾಕ್ ಮುರಿದು ಒಳ ನುಗ್ಗಿರುವ ಕಳ್ಳರು ಬೆಳ್ಳಿ ಮತ್ತು ಬಂಗಾರದ ಒಡವೆಗಳನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ದೇವರ ಬೆಳ್ಳಿಯ ವಿಗ್ರಹ, ಬೆಳ್ಳಿಯ ತಟ್ಟೆ, ಲೋಟ ಮತ್ತಿತರ ಒಡವೆಗಳನ್ನು ದೋಚಿದ್ದಾರೆ. ಕಳವಾದ ಒಡವೆಗಳ ವೌಲ್ಯ ಸುಮಾರು 95,500 ರೂ. ಎಂದು ಅಂದಾಜಿಸಲಾಗಿದೆ.