×
Ad

ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಕ್ಕೆ ಆದ್ಯತೆ: ಬಿ.ಬಿ.ನಿಂಗಯ್ಯ

Update: 2017-05-11 16:36 IST

ಮೂಡಿಗೆರೆ, ಮೇ 11: ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಅನೇಕ ಮೂಲ ಸೌಕರ್ಯಗಳಿಲ್ಲದೇ ಜನರು ಬೇಸತ್ತಿದ್ದಾರೆ. ಕುಡಿಯುವ ನೀರು, ರಸ್ತೆ ಸೌಲಭ್ಯ ಮುಂತಾದ ಮೂಲ ಸೌಕರ್ಯಗಳು ಗ್ರಾಮೀಣ ಭಾಗದ ಜನರಿಗೂ ತಲುಪಬೇಕು ಎಂದು ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಹೇಳಿದರು.
 ಅವರು ನಿಡುವಾಳೆಯಲ್ಲಿ ಜೋಗಿಮಕ್ಕಿಮನೆ ಮತ್ತು ಸಂಪಿಗೆಖಾನ್ ರಸ್ತೆ ಉದ್ಗಾಟಿಸಿ ಮಾತನಾಡಿದರು. ಆ ನಿಟ್ಟಿನಲ್ಲಿ ಜೆಡಿಎಸ್ ಪಕ್ಷವು ಹೆಚ್ಚಿನ ಅನುಧಾನಕ್ಕೆ ಆಗ್ರಹಿಸಲಾಗುವುದು ಹಾಗೂ ಮೂಲ ಸೌಕರ್ಯಕ್ಕೆ ಯಾರು ವಂಚಿತರಾಗದೇ ಹಳ್ಳಿಹಳ್ಳಿಗಳಿಗೂ ಸೌಲಭ್ಯಗಳು ದೊರೆಯುವಂತಾಗಲು ಪ್ರಯತ್ನಿಸಲಾಗುವುದು ಎಂದರು. 
  ಜೆಡಿಎಸ್‌ನ ಹಿಂದುಳಿದ ವರ್ಗದ ಅಧ್ಯಕ್ಷ ಸತೀಶ್‌ ಮರ್ಕಲ್ ಮಾತನಾಡಿ, ಎಸ್‌ಸಿ, ಎಸ್‌ಟಿ ವರ್ಗದ ಕಾಲನಿಗಳಿಗೆ ರಸ್ತೆ ಸಿಮೆಂಟೀಕರಣ, ನೀರಿನ ಸಮಸ್ಯೆಗೆ ಬೋರ್ವೆಲ್ ಕೊರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ವಿವಿಧ ಯೋಜನೆಗಳ ಹಣದಲ್ಲಿ ಮುಖ್ಯ ಸೌಲಭ್ಯಗಳಿಗೆ ಅನುಧಾನದ ಹಣ ಬಳಸಲು ಪ್ರಯತ್ನಿಸಲಾಗುತ್ತಿದೆ.ಗ್ರಾಮೀಣ ಪ್ರದೇಶವು ಅಭಿವೃಧ್ದಿ ಪಥದತ್ತ ಸಾಗಿಸುವುದು ಪಕ್ಷದ ಧ್ಯೇಯವಾಗಿದೆ ಎಂದು ಹೇಳಿದರು.
 ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಲಕ್ಷ್ಮಣ್‌ ಗೌಡ, ತಾಪಂ ಸದಸ್ಯೆ ವೇದಾಲಕ್ಷ್ಮಣ್, ಗುತ್ತಿಗೆದಾರ ಸತೀಶ್‌ ಮರ್ಕಲ್, ಬಿ.ಎನ್.ಆದರ್ಶ್, ಮರ್ಕಲ್‌ ಆನಂದ್, ಬಾಳೂರು ಜಗದೀಶ್, ಸುಧಾಕರ್‌ಗೌಡ, ಜೋಗಿಮಕ್ಕಿ ಲಕ್ಷ್ಮಣ್‌ಗೌಡ, ಜೋಗಿಮಕ್ಕಿ ರಾಮಚಂದ್ರ, ಕಾಳಿಕಟ್ಟೆ ಸುಬ್ರಾಯ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News