×
Ad

ಬಣಕಲ್: ಅನಿಯಮಿತ ಲೋಡ್‌ಶೆಡ್ಡಿಂಗ್, ಕುಡಿಯುವ ನೀರಿನ ಅಭಾವ; ಮೇ 15ರಂದು ಧರಣಿ

Update: 2017-05-11 16:57 IST

ಮೂಡಿಗೆರೆ, ಮೇ11: ಬಣಕಲ್ ಸುತ್ತಮುತ್ತ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಿದ್ದು ಗ್ರಾಮದ ಜನರಿಗೆ ಕುಡಿಯುವ ನೀರಿನ ಅಭಾವ ತಲೆದೋರಿದೆ. ಸಮಸ್ಯೆಗಳ ಬಗೆಹರಿಸುವಂತೆ ಒತ್ತಾಯಿಸಿ ಮೇ 15ರಂದು ಬಣಕಲ್ ಮೆಸ್ಕಾಂ ಕಚೇರಿ ಮುಂದೆ ಧರಣಿಸುವುದಾಗಿ ಗ್ರಾಪಂ ಸದಸ್ಯ ಸತೀಶ್ ಮತ್ತಿಕಟ್ಟೆ ತಿಳಿಸಿದ್ದಾರೆ.
 ವಿದ್ಯುತ್ ಇಲ್ಲದೆ ಗ್ರಾಮೀಣ ಭಾಗದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಬಣಕಲ್ ಗ್ರಾಪಂ ನೀರಿನ ಟ್ಯಾಂಕರ್‌ಗಳಿಂದ ಮತ್ತಿಕಟ್ಟೆ, ಚಕ್ಕಮಕ್ಕಿ ಮುಂತಾದ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ, ವಿದ್ಯುತ್ ಸಮಸ್ಯೆ ಬಗ್ಗೆ ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೆ ಉತ್ತರಿಸುವ ಸೌಜನ್ಯವು ಅಧಿಕಾರಿಗಳಲ್ಲಿ ಇಲ್ಲ. ಮೂಡಿಗೆರೆ ಭಾಗದಿಂದ ವಿದ್ಯುತ್ ಕಂಬಗಳು ರಸ್ತೆ ಬದಿಯಲ್ಲೇ ಬಂದಿದ್ದು, ಸಮಸ್ಯೆಯನ್ನು ಬಗೆಹರಿಸುವ ಆಸಕ್ತಿ ಮೆಸ್ಕಾಂ ಅಧಿಕಾರಿಗಳಿಗೆ ಇಲ್ಲದಿರುವುದು ನಿರ್ಲಕ್ಷದ ಕನ್ನಡಿಯಾಗಿದೆ. ದಿನದಲ್ಲಿ 6 ಗಂಟೆ ಹಗಲಿನಲ್ಲಿ ಲೋಡ್ ಶೆಡ್ಡಿಂಗ್ ಮಾಡಿದರೆ ರಾತ್ರಿ 12 ರಿಂದ 4 ಗಂಟೆವರೆಗೂ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ ಎಂದು ದೂರಿದರು. 
  ಬಣಕಲ್, ಕೊಟ್ಟಿಗೆಹಾರ, ಚಕ್ಕಮಕ್ಕಿ, ಬಗ್ಗಸಗೋಡು, ಗುಡ್ಡೆಟ್ಟಿ, ತರುವೆ, ದೊಡ್ಡನಂದಿ, ಹೆಗ್ಗುಡ್ಲು, ಮತ್ತಿಕಟ್ಟೆ ಮುಂತಾದ ಗ್ರಾಮಗಳಿಗೆ ವಿದ್ಯುತ್ ಸಮಸ್ಯೆಯಿಂದ ನೀರಿನ ಸರಬರಾಜಿಗೂ ತೊಂದರೆಯಾಗುತ್ತಿದೆ. ನಗರ, ಪಟ್ಟಣಗಳಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ಆದರೆ ಹಳ್ಳಿಗಳಿಗೆ ಮಾತ್ರ ಈ ತಾರತಮ್ಯ ಯಾಕೆ ಎಂದು ಪ್ರಶ್ನಿಸಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಧರಣಿ ನಡೆಸುವುದಾಗಿ ತಿಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News