×
Ad

ಸಿಡಿಲು ಬಡಿದು ಇಬ್ಬರು ಮೃತ್ಯು

Update: 2017-05-11 18:57 IST

ಚಿತ್ರದುರ್ಗ, ಮೇ 11: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಚಿತ್ರದುರ್ಗ ತಾಲೂಕಿನ ಬಾಗೇನಹಾಳ್ ಗ್ರಾಮದಲ್ಲಿ ನಡೆದಿದೆ.

ಜೋಗಿಹಟ್ಟಿ ಗ್ರಾಮದ ತಿಪ್ಪೇಸ್ವಾಮಿ (25) ಮೃತ ಯುವಕ. ಮರದ ಕೆಳಗೆ ಬೈಕ್ ನಿಲ್ಲಿಸಿ ನಿಂತಿದ್ದಾಗ ಮರಕ್ಕೆ ಹಾಗೂ ತಿಪ್ಪೇಸ್ವಾಮಿಯವರಿಗೆ ಸಿಡಿಲು ಬಡಿದು ಅವರು ಮೃತಪಟ್ಟಿದ್ದಾರೆ. ತುರುವನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕುರಿಗಾಹಿ ಮೃತ್ಯು:  ಸಿಡಿಲು ಬಡಿದು ಕುರಿಗಾಹಿಯೋರ್ವ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಪಾಲವ್ವನಹಳ್ಳಿ ಗುಡ್ಡದ ಬಳಿ ನಡೆದಿದೆ. ತಾಲೂಕಿನ ಭರಮಸಾಗರ ಗೊಲ್ಲರಹಟ್ಟಿ ಗ್ರಾಮದ ಚಂದ್ರಪ್ಪ(35) ಮೃತ ದುರ್ದೈವಿ. ಕುರಿ ಕಾಯುವ ಕೆಲಸ ಮಾಡಿಕೊಂಡು ಸಾಲುಹುಣುಸೆ ಗ್ರಾಮದಲ್ಲಿ ವಾಸವಾಗಿದ್ದ ಇವರು ಮಳೆ ಬರುತ್ತಿದ್ದ ಸಂದರ್ಭ ಮರದ ಕೆಳಗೆ ನಿಂತಿದ್ದರು. ಈ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಕುಸಿದುಬಿದ್ದ ಕೋಳಿ ಫಾರಂ ಗೋಡೆ: ವೃದ್ದ ಸಾವು 

ಕೋಳಿ ಫಾರಂ ಗೋಡೆ ಕುಸಿದುಬಿದ್ದು ವೃದ್ಧ ಮೃತಪಟ್ಟ ಘಟನೆ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಗೋವಿಂದಪ್ಪ(65) ಗೋಡೆಯ ಕೆಳಗೆ ಸಿಲುಕಿ ಮೃತಪಟ್ಟ ವೃದ್ಧ. ಚಳ್ಳಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News