ಪಿಯು ಫಲಿತಾಂಶ: ಕೊಡಗಿಗೆ 4ನೆ ಸ್ಥಾನ

Update: 2017-05-11 17:24 GMT

ಮಡಿಕೇರಿ, ಮೇ 11: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಕಳೆದ ಬಾರಿ ಶೇ.79.35ರಷ್ಟು ಫಲಿತಾಂಶ ಪಡೆದು ರಾಜ್ಯದಲ್ಲಿ ಮೂರನೆ ಸ್ಥಾನದಲ್ಲಿದ್ದ ಕೊಡಗು ಜಿಲ್ಲೆ, ಈ ಬಾರಿ ಶೇ.70.97ರಷ್ಟು ಫಲಿತಾಂಶದೊಂದಿಗೆ ನಾಲ್ಕನೆ ಸ್ಥಾನಕ್ಕೆ ಕುಸಿದಿದೆ.


 ಪ್ರಸಕ್ತ ಸಾಲಿನಲ್ಲಿ ಕೊಡಗಿನ 61 ಕಾಲೇಜುಗಳಿಂದ ಒಟ್ಟು 6,696 ಮಂದಿ ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 6,792 ಮಂದಿ ಹೊಸ ವಿದ್ಯಾರ್ಥಿಗಳಾಗಿದ್ದರೆ, 527 ಮಂದಿ ಮರು ಪರೀಕ್ಷೆ ಬರೆಯುವವರು ಮತ್ತು 372 ಮಂದಿ ಖಾಸಗಿಯಾಗಿ ಪರೀಕ್ಷೆ ಬರೆದವರಾಗಿದ್ದಾರೆ.


 ಕಳೆದ ಸಾಲಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ 5,390 ವಿದ್ಯಾರ್ಥಿಗಳಲ್ಲಿ 4,277 ಜನ ಉತ್ತೀರ್ಣರಾಗುವುದರೊಂದಿಗೆ ಶೇ.79.35ರಷ್ಟು ಫಲಿತಾಂಶ ಪಡೆದಿತ್ತು. ರಾಜ್ಯ ಮಟ್ಟದಲ್ಲಿ ಕೊಡಗು ಜಿಲ್ಲೆ 3ನೆ ಸ್ಥಾನಕ್ಕೇರಿತ್ತು. 2015ರಲ್ಲಿ ಶೇ.79.15ರಷ್ಟು ಫಲಿತಾಂಶ ಪಡೆದಿದ್ದ ಕೊಡಗು ಜಿಲ್ಲೆ ನಾಲ್ಕನೆ ಸ್ಥಾನದಲ್ಲಿತ್ತು. ಈ ಬಾರಿ ಮತ್ತೆ ಅದೇ ಸ್ಥಾನಕ್ಕೆ ಕುಸಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News