ನಕಲಿ ವೈದ್ಯನ ಚುಚ್ಚುಮದ್ದಿಗೆ ಬಲಿಯಾದ ವಿದ್ಯಾರ್ಥಿಗೆ ಎಸೆಸೆಲ್ಸಿಯಲ್ಲಿ 603 ಅಂಕ
Update: 2017-05-12 18:58 IST
ಕೋಲಾರ, ಮೇ 12: ನಕಲಿ ವೈದ್ಯ ನೀಡಿದ ಚುಚ್ಚುಮದ್ದಿನಿಂದ ಮೃತಪಟ್ಟಿದ್ದ ವಿದ್ಯಾರ್ಥಿ ಅಭಿರಾಮ್ ಇಂದು ಪ್ರಕಟವಾದ ಎಸೆಸೆಲ್ಸಿ ಫಲಿತಾಂಶದಲ್ಲಿ 603 ಅಂಕಗಳನ್ನು ಗಳಿಸಿದ್ದಾನೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ವಡ್ಡಹಳ್ಳಿ ನಿವಾಸಿ ಅಭಿರಾಮ್ ಕಿವಿನೋವಿನಿಂದ ಆಸ್ಪತ್ರೆಗೆ ತೆರಳಿದ್ದ. ಡಾ.ನವೀನ್ ಕುಮಾರ್ ಎಂಬ ನಕಲಿ ವೈದ್ಯ ಇಂಜೆಕ್ಷನ್ ಕೊಟ್ಟಿದ್ದು, ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ಅಭಿರಾಮ್ ಮೃತಪಟ್ಟಿದ್ದ. ಇಂದಿನ ಎಸೆಸೆಲ್ಸಿ ಫಲಿತಾಂಶದಲ್ಲಿ ಅಭಿರಾಮ್ 603 ಅಂಕಗಳನ್ನು ಗಳಿಸಿದ್ದಾನೆ.
ಈ ಬಗ್ಗೆ ಪ್ರಕರಣ ದಾಖಲಿಸಿರುವ ಬೇತಮಂಗಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.