×
Ad

ಎಸೆಸೆಲ್ಸಿ ಪರೀಕ್ಷೆ: ಅಂಧರ ಪ್ರೌಢಶಾಲೆಗೆ ಶೇ.100 ಫಲಿತಾಂಶ

Update: 2017-05-12 20:30 IST

ಚಿಕ್ಕಮಗಳೂರು, ಮೇ12 : ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠಶಾಲೆಯಲ್ಲಿ 2016-17ನೆ ಶೈಕ್ಷಣಿಕ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಮುಖ್ಯಸ್ಥ ಡಾ. ಕೃಷ್ಣೇಗೌಡ ತಿಳಿಸಿದ್ದಾರೆ.
 15 ವಿದ್ಯಾರ್ಥಿಗಳ ಪೈಕಿ 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು , ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 

ವಿದ್ಯಾರ್ಥಿಗಳಾದ ಎಂ.ಎಸ್.ಶರತ್  530, ಕೆ.ಜಿ.ಕೇಶವಮೂರ್ತಿ 500, ಸಿ.ಆರ್. ನವೀನ್ 483, ಸಿ.ಎನ್.ಮಣಿಕಂಠ ಸ್ವಾಮಿ 475, ಅನುಕುಮಾರ್ 465, ಆರ್.  ಮನುರಾಜ್ 456, ಜಿ.ಜಯರಾಂ 456, ಅನುಕುಮಾರ್ 454, ಭುವನೇಶ್ವರಿ 446, ಕೆ.ಸುಮನ್ 444 ಗುಜ್ಜಾರಪ್ಪ 433, ಅರುಣಕುಮಾರ್‌ ಎಸ್.ಎಸ್. 416, ವಿ.ರಾಧ 409, ಮನೋಜ್ 393, ಮತ್ತು ದೇವರಾಜ್ ಡಿ. 357 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಆಶಾಕಿರಣ ಚಾರಿಟೇಬಲ್ ಟ್ರಸ್ಟ್ ಮತ್ತು ಕರ್ನಾಟಕ ಅಂಧರ ಒಕ್ಕೂಟ ಆಡಳಿತ ಮಂಡಳಿಯ ಪರವಾಗಿ, ಶಾಲೆಯ ಮುಖ್ಯೋಪಾದ್ಯಾಯರು ಮತ್ತು ಸಿಬ್ಬಂದಿ ವರ್ಗದ ಪರವಾಗಿ ಶುಭಕೋರುವುದಾಗಿ ಡಾ. ಕೃಷ್ಣೇಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News