ಎಸೆಸೆಲ್ಸಿ ಫಲಿತಾಂಶ: ದಾವಣಗೆರೆ ಜಿಲ್ಲೆಗೆ ಜೆ. ದೇವಿಕಾ ಪ್ರಥಮ
Update: 2017-05-12 21:10 IST
ದಾವಣಗೆರೆ, ಮೇ 12: ನಗರದ ತರಳಬಾಳು ಶಾಲೆಯ ವಿದ್ಯಾರ್ಥಿನಿ ಜೆ. ದೇವಿಕಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 622 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಟಾಪರ್ ಎಂದು ಗುರುತಿಸಲಾಗಿದೆ.
ದೇವಿಕಾ ಸಂಸ್ಕೃತದಲ್ಲಿ 125, ಇಂಗ್ಲಿಷ್ 99, ಕನ್ನಡ 99, ಗಣಿತ 99, ವಿಜ್ಞಾನ 100, ಸಮಾಜ ವಿಜ್ಞಾನ 100 ಅಂಕ ಗಳಿಸಿರುತ್ತಾರೆ.
ತಂದೆ ಪಂಪಾಪತಿ ಪಶು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಸರಸ್ವತಿ ಗೃಹಿಣಿ.
ದಾವಣಗೆರೆಯ ಅನುಭವ ಮಂಟಪದ ವಿದ್ಯಾರ್ಥಿನಿ ಸ್ವಾತಿ ಕೆ. 625ಕ್ಕೆ 620 ಅಂಕ ಹಾಗೂ ಮಾನಗೂರು ಬಸಪ್ಪ ಶಾಲೆಯ ವಿದ್ಯಾರ್ಥಿನಿ ಚಿನ್ಮಯಿ 625ಕ್ಕೆ 600 ಅಂಕ ಗಳಿಸಿರುತ್ತಾರೆ.
ಶಿಕ್ಷಕರು ಮಾಡುತ್ತಿದ್ದ ಪಾಠಗಳನ್ನು ಶ್ರದ್ಧೆಯಿಂದ ಆಲಿಸುವುದು ಹಾಗೂ ಮನೆಯಲ್ಲಿ ಅದನ್ನು ಮತ್ತೊಮ್ಮೆ ಮನನ ಮಾಡಿಕೊಳ್ಳುತ್ತಿದ್ದೆ. ಅಲ್ಲದೆ, ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿರುವುದು ಹೆಚ್ಚಿನ ಅಂಕ ಗಳಿಕೆಗೆ ಸಹಾಯವಾಗಿದೆ. ಮುಂದೆ ವಿಜ್ಞಾನಿಯಾಗುವಾಸೆ.
-ಜೆ. ದೇವಿಕಾ