ಅಪಘಾತದಲ್ಲಿ ಮಹಿಳೆ ಸಾವು

Update: 2017-05-12 17:22 GMT

ಮಡಿಕೇರಿ, ಮೇ 12: ನಿಂತಿದ್ದ ಟ್ಯಾಂಕರ್‌ಗ್ ಮಿನಿಬಸ್ ಢಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪ ಸಮೀಪ ಏಳನೆ ಹೊಸಕೋಟೆಯಲ್ಲಿ ಶುಕ್ರವಾರ ನಡೆದ ವರದಿಯಾಗಿದೆ.


  ತಮಿಳುನಾಡಿನ ತಿರುಪುರಂ ಜಿಲ್ಲೆಯ ವೆಲ್ಲಿಕೊಯ್ಲು ಎಂಬ ಗ್ರಾಮದಿಂದ ಪ್ರವಾಸಕ್ಕೆಂದು ಮಡಿಕೇರಿಗೆ ಆಗಮಿಸಿದ್ದ 13 ಜನರಿದ್ದ ಮಿನಿಬಸ್ 7ನೆ ಹೊಸಕೋಟೆ ವೃತ್ತದ ಬಳಿ ಬರುತ್ತಿದ್ದಾಗ ಕಲ್ಲುಕೋರೆ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ಲಾರಿ ಆಕಸ್ಮಿಕವಾಗಿ ಮಿನಿ ಬಸ್ಸಿನ ಹಿಂಬದಿಗೆ ಢಿಕ್ಕಿಯಾಗಿದೆ.

ಪರಿಣಾಮ ವಿಚಲಿತಗೊಂಡ ಮಿನಿಬಸ್ ಚಾಲಕ ವಾಹನವನ್ನು ನಿಯಂತ್ರಣಕ್ಕೆ ತರುವ ಸಂದಭರ್ ಮುಂಭಾಗದಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಢಿಕ್ಕಿಯಾಗಿದೆ. ಪರಿಣಾಮ ಬಸ್‌ನಲ್ಲಿದ್ದ ವೃದ್ಧೆ ಮೋಹಿನಾ (64) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News