×
Ad

​ಸಾರಿಗೆ ಬಸ್ ಹರಿದು ಟೋಲ್ ಸಿಬ್ಬಂದಿ ಮೃತ್ಯು

Update: 2017-05-14 21:25 IST

ನಾಗಮಂಗಲ, ಮೇ 14: ರಸ್ತೆ ದಾಟುತ್ತಿದ್ದ ಟೋಲ್ ಸಿಬ್ಬಂದಿ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಲಿಗೆರೆ ವೃತ್ತದ ಬಳಿ ರವಿವಾರ ನಡೆದಿದೆ.

ಟೋಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ  ಚಾಮಲಾಪುರ ನಿವಾಸಿ ರುದ್ರೇಗೌಡ ಎಂಬವರ ಪುತ್ರ ಮೋಹನ್‌ಕುಮಾರ್ (44) ಮೃತಪಟ್ಟವರು.
 

ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News