ಅಂಗಡಿಗಳಿಗೆ ನುಗ್ಗಿದ ಚೋರರು : ನಗದು ಕಳ್ಳತನ
Update: 2017-05-14 22:48 IST
ಮಡಿಕೇರಿ, ಮೇ 14: ನಗರದ ಹೃದಯ ಭಾಗದ ಎರಡು ಅಂಗಡಿಗಳಿಗೆ ನುಗ್ಗಿದ ಚೋರರು ನಗದು ಕೊಂಡೊಯ್ದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಕಾಲೇಜು ರಸ್ತೆಯಲ್ಲಿರುವ ಕೆಪಿಎಂ ದಿನಸಿ ಅಂಗಡಿಯ ಬಾಗಿಲನ್ನು ಒಡೆದು ಒಳನುಗ್ಗಿ ರೂ.53 ಸಾವಿರ ನಗದನ್ನು ದೋಚಿದ್ದಾರೆ ಎನ್ನಲಾಗಿದೆ. ನಂತರ ಕಾವೇರಿ ಮಹಲ್ ಚಿತ್ರ ಮಂದಿರದ ಕಟ್ಟಡದಲ್ಲಿರುವ ವೈನ್ ಶಾಪ್‌ನ ಬಾಗಿಲನ್ನು ಒಡೆದು ಕಳ್ಳತನಕ್ಕೆ ಪ್ರಯತ್ನ ಮಾಡಿದ್ದಾರೆ. ಆದರೆ ಏನನ್ನೂ ಕದ್ದೊಯ್ದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ನಗರ ಅಪರಾಧ ವಿಭಾಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.