ಸಿಡಿಲು ಬಡಿದು ಮಹಿಳೆ ಮೃತ್ಯು
Update: 2017-05-15 10:48 IST
ಭಟ್ಕಳ, ಮೇ 15: ಸಿಡಿಲು ಬಡಿದು ಮಹಿಳೆಯೋರ್ವರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡ ಘಟನೆ ಭಟ್ಕಳ ಪಟ್ಟಣದ ಮದೀನಾ ಕಾಲನಿಯ ಫಿರ್ದೌಸ್ ನಗರದಲ್ಲಿ ನಡೆದಿದೆ.
ಬೀಬಿ ಸುಫಿಯಾ (22) ಮೃತಪಟ್ಟಿದ್ದು, ಮುಬಾರಕ್ (19) ಹಾಗೂ ಮಹಮದ್ ಕೈಫ್ (6) ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 8 ತಿಂಗಳ ಹಿಂದೆಯಷ್ಟೇ ಸುಫಿಯಾ ವಿವಾಹವಾಗಿದ್ದರು.