×
Ad

ಗುಂಡಿಗೆ ಎದೆಯೊಡ್ಡಿ ಪೊಲೀಸ್‌ ಅಧಿಕಾರಿಯೊಬ್ಬರ ಪ್ರಾಣ ಉಳಿಸಿದ ನಾಯಿ... !

Update: 2017-05-15 18:11 IST

ಹೂಸ್ಟನ್ , ಮೇ 15:ಬಾಂಬ್ ಪತ್ತೆ ದಳದ ನಾಯಿಯೊಂದು ಶೂಟೌಟ್  ವೇಳೆ ಗುಂಡಿಗೆ ಎದೆಯೊಡ್ಡಿ ಪೊಲೀಸ್ ಅಧಿಕಾರಿಯೊಬ್ಬರ ಪ್ರಾಣ ಉಳಿಸಿರುವ ಘಟನೆ ಅಮೆರಿಕದ ಫ್ಲೋರಿಡಾದ ಜುಪಿಟರ್ ಲ್ಲಿ ಶುಕ್ರವಾರ ನಡೆದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭದ್ರತಾ ಪಡೆಯಲ್ಲಿದ್ದ ಪೊಲೀಸ್ ನಾಯಿ ಕೆ9 ಕಾಸ್ಪರ್ ಪಲ್ಮ್ ಬೀಚ್ ಶೆರೀಫ್ ಕಚೇರಿ (ಪಿಬಿಎಸ್ಒ) ಬಳಿ ನಡೆದ ಗುಂಡಿನ ಚಕಮಕಿ ವೇಳೆ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದೆ.
 ದರೋಡೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಫಲಿಪ್ ಒಶೇಯಾ ಹಾಗೂ ಪೊಲೀಸರ ಗುಂಡಿನ ಕಾಳಗ ನಡೆಯುತ್ತಿದ್ದ ವೇಳೆ ನಾಯಿ ಬುಲೆಟ್‌ಗೆ ಎದೆಯೊಡ್ಡಿ ಪೊಲೀಸ್‌ ಅಧಿಕಾರಿಯೊಬ್ಬರನ್ನು ರಕ್ಷಿಸಿದೆ. 
ಆರೋಪಿ ಒಶೇಯಾನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.
ಗಂಭೀರ ಗಾಯಗೊಂಡಿರುವ ಕೆ9 ಕಾಸ್ಪರ್  ನಾಯಿಯನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ.  ಚಿಕಿತ್ಸೆ ಪಡೆಯುತ್ತಿರುವ ನಾಯಿಯ ಪೋಟೊವನ್ನು  ಬೀಚ್‌ ಶೇರಿಫ್ ಕಚೇರಿ ಫೇಸ್ ಬುಕ್ ನಲ್ಲಿ ಪ್ರಕಟಿಸಿ‌ದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor