×
Ad

ಅಕ್ರಮ ಜಾನುವಾರು ಸಾಗಾಟ: ಮೂವರ ಬಂಧನ

Update: 2017-05-15 22:47 IST

ಭಟ್ಕಳ, ಮೇ 15: ಲಾರಿಯೊಂದರಲ್ಲಿ ಅಕ್ರಮವಾಗಿ 15 ಕೋಣಗಳನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೈಲಹೊಂಗಲದ ಆನಂದ ಮೂಗಪ್ಪ ಮಾಟೋಳ್ಳಿ, ಮಲ್ಲನಗೌಡ, ಸಿದ್ದಪ್ಪ ಸುಣಗಾರ ಎಂದು ಗುರುತಿಸಲಾಗಿದೆ. ಇವರು ಯಾವುದೇ ಅನುಮತಿಯಿಲ್ಲದೆ 15 ಕೋಣಗಳನ್ನು ಲಾರಿಯೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ. ಶಂಸುದ್ದೀನ್ ವೃತ್ತದಲ್ಲಿ ಸಾರ್ವಜನಿಕರು ಲಾರಿಯನ್ನು ತಡೆದು ನಿಲ್ಲಿಸಿ, ಆರೋಪಿಗಳನ್ನು ನಗರಠಾಣೆಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News