×
Ad

​ಅಕ್ರಮ ಸಾಗುವಾನಿ ನಾಟಾ ವಶ: ಆರೋಪಿಗಳು ನಾಪತ್ತೆ

Update: 2017-05-15 23:20 IST

 ರಿಪ್ಪನ್‌ಪೇಟೆ, ಮೇ 15: ಸಮೀಪದ ಸಿರಿಗೆರೆ ವನ್ಯಜೀವಿ ವಲಯ ವ್ಯಾಪ್ತಿಯ ತಮ್ಮಡಿಹಳ್ಳಿ ಬಳಿ 16 ಸಾಗುವಾನಿ ತುಂಡುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆಂಬ ಖಚಿತ ಮಾಹಿತಿಯನ್ನಾಧರಿಸಿ ಸಿರಿಗೆರೆ ವಲಯ ಅರಣ್ಯಾಧಿಕಾರಿ ಕೆ.ರವಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ನಾಟಾ ಸಾಗಿಸಲು ಬಳಸಿದ್ದ ಮಾರುತಿ ಒಮ್ನಿ ವಾಹನ ಬಿಟ್ಟು ಆರೋಪಿಗಳು ಪರಾರಿಯಾಗಿದ್ದು, ಪೋಲಿಸರು ವಾಹನಸಹಿತ 70 ಸಾವಿರ ರೂ. ಮೌಲ್ಯದ ಸಾಗುವಾನಿ ನಾಟಾ ವಶ ಪಡಿಸಿಕೊಂಡಿದ್ದು ಆರೋಪಿಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಜಿ. ಮಂಜುನಾಥ್, ವನಪಾಲಕ ರಾಜೇಶ್, ರಮೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News