×
Ad

ಕೆಎಸ್ಸಾರ್ಟಿಸಿ ಬಸ್-ಟಾಟಾ ಏಸ್ ಮುಖಾಮುಖಿ ಢಿಕ್ಕಿ: ಇಬ್ಬರು ಮೃತ್ಯು

Update: 2017-05-16 18:36 IST

ಹರಿಹರ, ಮೇ 16: ಕೆಎಸ್ಸಾರ್ಟಿಸಿ ಬಸ್ ಹಾಗೂ ಟಾಟಾ ಏಸ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಬೆಳ್ಳೂಡಿ ಬಳಿ ಮಂಗಳವಾರ ಸಂಜೆ ನಡೆದಿದೆ.

ಮೃತರನ್ನು ಮಲೆಬೆನ್ನೂರು ಪಟ್ಟಣದ ಶೌಕತ್ ಅಲಿ (35) ಹಾಗೂ ಇರ್ಫಾನ್ (30) ಎಂದು ಗುರುತಿಸಲಾಗಿದೆ.

ಶಿವಮೊಗ್ಗದಿಂದ ಹರಿಹರ ಮಾರ್ಗವಾಗಿ ಗದಗಕ್ಕೆ ತೆರಳುತ್ತಿದ್ದ ಸರಕಾರಿ ಬಸ್, ಕುಡಿಯುವ ನೀರಿನ ಖಾಲಿ ಕ್ಯಾನ್ ತುಂಬಿಕೊಂಡು ಹರಿಹರದಿಂದ ಮಲೇಬೆನ್ನೂರು ಗ್ರಾಮಕ್ಕೆ ಹೋಗುತ್ತಿದ್ದ ಟಾಟಾ ಏಸ್‌ಗೆ ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಟಾಟಾ ಏಸ್‌ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೆ, ಟಾಟಾ ಏಸ್ ಹಾಗೂ ಬಸ್‌ನಲ್ಲಿದ್ದ 8ಕ್ಕೂ ಅಧಿಕ ಜನರಿಗೆ ಗಾಯಗೊಂಡಿದ್ದು, ಹರಿಹರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಎಸ್‌ಪಿ ಯಶೋಧಾ ಒಂಟಿಗೋಡಿ ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News