ಮಹಿಳೆ ಆತ್ಮಹತ್ಯೆ
Update: 2017-05-16 22:47 IST
ಚಿಕ್ಕಮಗಳೂರು, ಮೇ 16: ಕಳಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಕಳಸ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ತಲಗೂರು ಹಾಲಂಬಿ ಅರಮನೆ ಎಂಬಲ್ಲಿನ ಮಂಜುನಾಥ ಎಂಬವರ ಸಹೋದರಿ ಮಂಜುಳಾ(32) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ಕಳೆದ ಮೂರು ತಿಂಗಳಿನಿಂದ ಮಾನಸಿಕ ಅಸ್ವಸ್ಥೆಯಾದಂತೆ ಕಂಡು ಬರುತ್ತಿದ್ದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮೃತಳ ತಂದೆ ತಿಳಿಸಿದ್ದಾರೆ.