ವ್ಯಕ್ತಿ ನಾಪತ್ತೆ: ಪ್ರಕರಣ ದಾಖಲು
Update: 2017-05-16 22:52 IST
ಚಿಕ್ಕಮಗಳೂರು, ಮೇ 16: ಮದ್ಯ ವಯಸ್ಕನೋರ್ವ ಕಾಣೆಯಾಗಿರುವ ಕುರಿತು ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಸ್ತಾರೆ ಬಳಿಯ ಹಚ್ಚಡಮನೆ ಎಂಬಲ್ಲಿನ ಪುಟ್ಟಸ್ವಾಮಿ ಗೌಡ ಎಂಬವರ ಪುತ್ರ ಕಾರ್ತಿಕ್(38) ನಾಪತ್ತೆಯಾದವರು. ಇತ್ತೀಚೆಗೆ ಶಿವಮೊಗ್ಗಕ್ಕೆ ಇಂಡಸ್ಟ್ರಿಯಲ್ ತರಬೇತಿ ನಿಮಿತ್ತ ತೆರಳಿದ ಈತ ಮನೆಗೆ ಹಿಂತಿರುಗಿ ಬಂದಿಲ್ಲ ಎನ್ನಲಾಗಿದೆ.
ಕಾಣೆಯಾದ ಕಾರ್ತಿಕ್ ಬಳಿ ಮೊಬೈಲ್ 9483357395 ಸಂಖ್ಯೆ ಇದೆ. ಈತನ ಬಗ್ಗೆ ಸುಳಿವು ದೊರೆತವರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟನೆ ತಿಳಿಸಿದೆ.