×
Ad

ನಮ್ಮ ಜಗಳ ಮುಗೀತು... ಇನ್ನು ಅವರ ಜಗಳ ಶುರುವಾಗಿದೆ: ಈಶ್ವರಪ್ಪ

Update: 2017-05-17 12:51 IST

ಬೆಂಗಳೂರು, ಮೇ 17: " ನಮ್ಮ ಜಗಳ ಮುಗಿದಿದೆ. ಇನ್ನು ಅವರ ಜಗಳ ಶುರುವಾಗಿದೆ ” ಎಂದು ಕಾಂಗ್ರೆಸ್‌ ಗೊಂದಲದ ಕುರಿತು ವಿಧಾನಸಭೆಯ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಬಂದು  ಹೋದ್ರು ಆದರೆ ಭಿನ್ನಮತ ನಿಂತಿಲ್ಲ ಎಂದರು.
ನಮ್ಮ ಸಮಸ್ಯೆ ನೂರಕ್ಕೆ ನೂರರಷ್ಟು ಬಗೆ ಹರಿಯುತ್ತದೆ. ನಮ್ಮ ಜಗಳದಿಂದ ಕಾರ್ಯಕರ್ತರಿಗೆ ನೋವಾಗಿದ್ದು ನಿಜ” ಎನ್ನುವುದನ್ನು ಈಶ್ವರಪ್ಪ ಒಪ್ಪಿಕೊಂಡರು.
"ನಾನು ಹಾಗೂ  ಯಡಿಯೂರಪ್ಪ ಎರಡು ದೇಹ . ಆದರೆ ಜೀವ ಒಂದೇ.ಅವರ ನಾಯಕತ್ವದಲ್ಲೇ ರಾಜ್ಯದಲ್ಲಿ ಮುಂದೆ ಚುನಾವಣೆ ಎದುರಿಸುತ್ತೇವೆ. ತಾಕತ್ತಿದ್ದರೆ ಕಾಂಗ್ರೆಸ್‌ ನವರು ಮುಖ್ಯ ಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿ ಎಂದು ಈಶ್ವರಪ್ಪ ಸವಾಲೆಸದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News