×
Ad

ಧೃತಿಗೆಡದೆ ಪರೀಕ್ಷೆ ಎದುರಿಸಿ: ಹಳೇಕೋಟೆ ರಮೇಶ್

Update: 2017-05-17 17:07 IST

ಮೂಡಿಗೆರೆ, ಮೇ 17: ಅನುತ್ತೀರ್ಣರಾದ ವಿದ್ಯಾರ್ಥಿಗಳು ಧೃತಿಗೆಡದೆ ಪೂರಕ ಪರೀಕ್ಷೆಗೆ ತಯಾರಿ ನಡೆಸುವ ಮೂಲಕ ಶಿಕ್ಷಣವನ್ನು ಮೊಟಕುಗೊಳಿಸದೆ ಮುಂದುವರಿಯಬೇಕೆಂದು ಸಾಹಿತಿ ಹಾಗೂ ಕಾಫಿ ಬೆಳೆಗಾರ ಹಳೇಕೋಟೆ ರಮೇಶ್ ಹೇಳಿದರು.
  
  ಅವರು ಬುಧವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಹೆಜ್ಜೆ ಗೆಳೆಯರ ಬಳಗ ಹಾಗೂ ತಾಲೂಕು ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಎಸೆಸೆಲ್ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷಾ ಪೂರ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 

  ಲಯನ್ಸ್ ಸಂಸ್ಥೆಯ ಅಧ್ಯಕ್ಷ ಹಳಸೆ ಚಂದ್ರಕಾಂತ್ ಮಾತನಾಡಿ, ಆರ್ಥಿಕ ಮುಗ್ಗಟ್ಟಿನಿಂದಾಗಲೀ ಅಥವಾ ದುಶ್ಚಟಕ್ಕೆ ಬಲಿಯಾಗಿದ್ದರಿಂದಾಗಲಿ ಶಿಕ್ಷಣವನ್ನು ಮೊಟಕುಗೊಳಿಸಿದರೆ ಮುಂದಿನ ಜೀವನದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು. ಆದ್ದರಿಂದ ಶಿಕ್ಷಣವನ್ನು ಮೊಟಕುಗೊಳಿಸದೆ, ಪದವಿಯವರೆಗೂ ಕಲಿತು ಉನ್ನತಮಟ್ಟದ ಅಧಿಕಾರಿಗಳಾಗುವಂತೆ ತಿಳಿಸಿದರು.
  ಪತ್ರಕರ್ತ ಕಿರುಗುಂದ ಅಬ್ಬಾಸ್, ಹೆಜ್ಜೆ ಗೆಳೆಯರ ಬಳಗದ ಅಧ್ಯಕ್ಷ ಹಾಗೂ ತರಬೇತುದಾರ ಕೆ.ವಾಸು ದೇವ್ ಮಾತನಾಡಿದರು.
  ಪತ್ರಕರ್ತರ ಸಂಘದ ಅಧ್ಯಕ್ಷ ನಯನ ತಳವಾರ ಅಧ್ಯಕ್ಷತೆ ವಹಿಸಿದ್ದರು.  ಪತ್ರಕರ್ತ ಎ.ಆರ್.ಉದಯಶಂಕರ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News