ಸಿಎಂ ಲಿಂಗಪ್ಪರಿಗೆ ವಿಧಾನಪರಿಷತ್ ಪ್ರವೇಶ ನಿರಾಕರಿಸಿದ ರಾಜ್ಯಪಾಲರು
Update: 2017-05-17 17:32 IST
ಬೆಂಗಳೂರು, ಮೇ 17: ಮೋಹನ್ ಕೊಂಡಜ್ಜಿ ಮತ್ತು ಪಿ.ಆರ್ ರಮೇಶ್ ಅವರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಆದರೆ ಇದೇ ವೇಳೆ ಶಿಕ್ಷಣ ಮತ್ತು ಸಮಾಜಸೇವಾ ಕೋಟಾದಡಿ ಸಿಎಂ ಲಿಂಗಪ್ಪ ಬರುವುದಿಲ್ಲ ಎಂದು ನಾಮನಿರ್ದೇಶನಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರಕಾರ ಸಲ್ಲಿಸಿದ್ದ ಪಟ್ಟಿಯಲ್ಲಿದ್ದ ಮೂವರ ಪೈಕಿ ಇಬ್ಬರ ನಾಮನಿರ್ದೇಶನಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ರಾಜ್ಯ ಸರಕಾರ ಇತ್ತೀಚೆಗೆ ಮೋಹನ್ ಕೊಂಡಜ್ಜಿ , ಪಿ.ಆರ್ ರಮೇಶ್ ಮತ್ತು ಸಿಎಂ ಲಿಂಗಪ್ಪ ಹೆಸರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಿ ಅಂಕಿತಕ್ಕಾಗಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದರು.