×
Ad

ರಾಜ್ಯ ಮಟ್ಟದ ವಸಂತೋತ್ಸವ - 2017 ಕಾರ್ಯಕ್ರಮ

Update: 2017-05-17 17:58 IST

ಶಿವಮೊಗ್ಗ, ಮೇ 17: ಕಾವ್ಯ, ಗಾಯನ, ನೃತ್ಯ ಸಂಭ್ರಮದ ರಾಜ್ಯ ಮಟ್ಟದ ವಸಂತೋತ್ಸವ-2017ನ್ನು ಕುವೆಂಪು ರಂಗಮಂದಿರದಲ್ಲಿ ಮೇ 21ರಂದು ಏರ್ಪಡಿಸಲಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಅಶ್ರಯದಲ್ಲಿ ಮೇ 21ರಂದು ಇಡೀ ದಿನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಮೆರವಣಿಗೆ ಮಥುರಾ ಪ್ಯಾರಾಡೈಸ್ ಹೊಟೆಲ್‌ನಿಂದ ರಂಗಮಂದಿರದವರೆಗೆ ನಡೆಯಲಿದೆ. 10:30ಕ್ಕೆ ಸಭಾ ಕಾರ್ಯಕ್ರಮ ಕುವೆಂಪು ವಿವಿ ಕುಲಸಚಿವ ಪ್ರೊ. ಭೋಜ್ಯಾನಾಯ್ಕ ಅವರಿಂದ ಉದ್ಘಾಟನೆಯಾಗಲಿದೆ ಎಂದರು.
 ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ವಹಿಸುವರು. ಅತಿಥಿಗಳಾಗಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ಲೇಖಕಿ ವಿಜಯಶ್ರೀ, ಭದ್ರಾವತಿ ಆಕಾಶವಾಣಿಯ ಸಹಾಯಕ ನಿರ್ದೇಶಕ ಜಿ.ಕೆ. ರವೀಂದ್ರಕುಮಾರ್, ಜಿಲ್ಲಾಧಿಕಾರಿ ಡಾ. ಲೋಕೇಶ್ ಮೊದಲಾದವರು ಪಾಲ್ಗೊಳ್ಳುವರು ಎಂದರು.
 
 ಕಾವ್ಯ ಪ್ರಸ್ತುತಿ, ಕನ್ನಡ ಕಾವ್ಯ ಪರಂಪರೆಯ ಮೈಲಿಗಲ್ಲುಗಳು ಎಂಬ ಗೋಷ್ಠಿ ನಡೆಯಲಿದೆ. ಇದರಲ್ಲಿ ಕುವೆಂಪು ಕವಿತೆಯನ್ನು ಕಡಿದಾಳು ಶಾಮಣ್ಣ ಓದುವರು, ಬಿ.ಕೆ. ಸುಮಿತ್ರಾ ಹಾಡುವರು. ಬೇಂದ್ರೆ ಕವಿತೆಯನ್ನು ಪ್ರೊ. ಎಸ್. ಸಿರಾಜ್ ಅಹಮದ್ ಓದುವರು, ಸೀಮಾ ರಾಯ್ಕರ್ ಹಾಡುವರು, ಪುತಿನ ಕವಿತೆಯನ್ನು ಸವಿತಾ ನಾಗಭೂಷಣ ಓದುವರು. ನಗರ ಶ್ರೀನಿವಾಸ ಉಡುಪ ಹಾಡುವರು. ಅಡಿಗರ ಕವಿತೆಯನ್ನು ವಿದ್ಯಾ ಹೆಗ್ಗೋಡು ಓದುವರು, ಪಂಚಮ್ ಹಳಿಬಂಡಿ ಹಾಡುವರು. ಕೆ.ಎಸ್.ನ ಕವಿತೆಯನ್ನು ನರಹಳ್ಳಿ ಬಾಲಸುಬ್ರಹ್ಮಣ್ಯ ಓದುವರು, ವೈ.ಕೆ. ಮುದ್ದುಕೃಷ್ಣ ಹಾಡುವರು ಎಂದು ಹೇಳಿದರು.

ಸಂಜೆ 6:30ಕ್ಕೆ ಸಮಾರೋಪ ನಡೆಯಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ ಸಮಾರೋಪ ನುಡಿಯಾಡುವರು. ಅಧ್ಯಕ್ಷತೆಯನ್ನು ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ವಹಿಸುರು. ಶಾಸಕ ಬಿ.ವೈ.ರಾಘವೇಂದ್ರ ಕಲಾವಿದರನ್ನು ಸನ್ಮಾನಿಸುವರು.

ಮುಖ್ಯ ಅತಿಥಿಗಳಾಗಿ ಗಾಯಕ ಗರ್ತಿಕೆರೆ ರಾಘಣ್ಣ, ಬೆಂಗಳೂರು ದೂರದರ್ಶನ ಕೇಂದ್ರದ ಉಪನಿರ್ದೇಶಕ ಚಂದ್ರಶೇಖರ್, ಡಿ ಎಸ್ ಅರುಣ್, ಕೆ. ಯುವರಾಜ, ಡಾ. ವೆಂಕಟರಾವ್, ಡಾ. ಮಲ್ಲೇಶ್ ಹುಲ್ಲಮನಿ ಮೊದಲಾದವರು ಪಾಲ್ಗೊಳ್ಳುವರು ಎಂದು ವಿವರಿಸಿದರು.
  ಪತ್ರಿಕಾಗೋಷ್ಠಿಯಲ್ಲಿ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಎನ್. ಗೋಪಿನಾಥ, ಶಾಂತಾ ಶೆಟ್ಟಿ, ವಾಸು ಭದ್ರಾವತಿ, ಶೋಭಾ ಸತೀಶ್, ಸಂಧ್ಯಾ ಶರ್ಮಾ, ಜಿ. ವಿಜಯಕುಮಾರ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News