ಎಸೆಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಕ್ರಿಕೆಟ್ ಪಟು
Update: 2017-05-18 00:07 IST
ಶಿವಮೊಗ್ಗ, ಮೇ. 17: ಪ್ರತಿಭಾನ್ವಿತ, ಉದಯೋನ್ಮುಖ ಯುವ ಕ್ರಿಕೆಟ್ ಆಟಗಾರ ಮುಹಮದ್ ಹಮ್ಜ್ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ತೇರ್ಗಡೆ ಹೊಂದುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ನಗರದ ಮಿಳಘಟ್ಟ ಬಡಾವಣೆಯ ನಿವಾಸಿಯಾದ ಮಹಮ್ಮದ್ ಹಮ್ಜ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಶಿವಮೊಗ್ಗ ವಲಯದ 16 ರ ವಯೋಮಿತಿಯೊಳಗಿನ ಕ್ರಿಕೆಟ್ ತಂಡದಲ್ಲಿ ಆಟವಾಡುತ್ತಿದ್ದಾರೆ.
ಎಜುಕೇರ್ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ ಮಹಮ್ಮದ್ ಹಮ್ಜ್ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 89.12 ರಷ್ಟು ಅಂಕ ಗಳಿಸಿದ್ದಾರೆ. ಬಿಡುವಿಲ್ಲದ ಕ್ರಿಕೆಟ್ ಆಟದ ನಡುವೆಯೂ ಮಹಮ್ಮದ್ ಹಮ್ಜ್ ಉತ್ತಮ ಅಂಕ ಗಳಿಸಿರುವುದಕ್ಕೆ ಇತರೆ ಕ್ರೀಡಾಪಟುಗಳು ಹಾಗೂ ಶಾಲೆಯ ಆಡಳಿತ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.