×
Ad

ದೇವಸ್ಥಾನದಲ್ಲಿ ವಿಶೇಷ ಪೂಜೆ, ದರ್ಗಾದಲ್ಲಿ ಪ್ರಾರ್ಥನೆ

Update: 2017-05-18 18:09 IST

ಹಾಸನ, ಮೇ 18: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ 85ನೆ ವರ್ಷದ ಹುಟ್ಟು ಹಬ್ಬದ ಅಂಗವಾಗಿ ನಗರದ ದೇವಸ್ಥಾನದಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ,  ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ನಗರದ ದೇವಿಗೆರೆ ಬಳಿ ಇರುವ ನೀರು ಬಾಗಿಲು ಆಂಜನೇಯ ದೇವಾಲಯಕ್ಕೆ ತೆರಳಿ ದೇವೇಗೌಡರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅಝಾದ್ ರಸ್ತೆಯಲ್ಲಿರುವ ದರ್ಗಾದಲ್ಲಿ ಪ್ರಾರ್ಥಿಸಿದರು. ನಂತರ ಪಟಾಕಿ ಸಿಡಿಸಿ, ದೇವೇಗೌಡರಿಗೆ ಜೈಕಾರ ಹಾಕಲಾಯಿತು. ನಗರದ ಶ್ರೀ ಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಬ್ರೆಡ್ ಮತ್ತು ಹಾಲನ್ನು ಕೂಡ ವಿತರಿಸಿದರು. ನಂತರ ಬಾಲ ಮಂದಿರಕ್ಕೆ ತೆರಳಿ ಮಕ್ಕಳ ಜೊತೆ ಕೇಕ್ ಕತ್ತರಿಸಿದರು. ಎಲ್ಲಾ ಮಕ್ಕಳಿಗೂ ಹೊದಿಕೆಯನ್ನು ವಿತರಿಸಲಾಯಿತು.

  ಕ್ಷೇತ್ರದ ಶಾಸಕರಾದ ಹೆಚ್.ಎಸ್. ಪ್ರಕಾಶ್ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಪ್ರಧಾನಿಯವರು ಒಬ್ಬ ರೈತನಾಗಿ ಬಂದು ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ಉನ್ನತ ಹುದ್ದೆ ಏರಿದ ಜಿಲ್ಲೆಯ ರೈತರು ಎಂದು ಕೊಂಡಾಡಿದರು. ಹಿರಿಯ ರಾಜಕಾರಣಿ ಈ ವಯಸ್ಸಿನಲ್ಲೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರಿಗೆ ಹೆಚ್ಚಿನ ಜನರ ಸೇವೆ ಯಲ್ಲಿ ತೊಡಗಿಸಿಕೊಳ್ಳಲು ದೇವರು ಆಯಸ್ಸು, ಆರೋಗ್ಯ ಹಾಗೂ ಅಧಿಕಾರ ನೀಡಲಿ ಎಂದು ಪಾರ್ಥಿನೆ ಮಾಡಿ, ಅವರ ಹೆಸರಿನಲ್ಲಿ ಪೂಜೆ ಸಲ್ಲಿಸಲಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಜೆಡಿಎಸ್ ಮುಖಂಡರಾದ ಕೆ.ಎಂ. ರಾಜೇಗೌಡ ಮಾತನಾಡಿದರು. 

ಈ ಸಂದರ್ಭ ನಗರಸಭೆ ಅಧ್ಯಕ್ಷ ಎಚ್.ಎಸ್. ಅನೀಲ್ ಕುಮಾರ್, ಜಿಪಂ ಉಪಾಧ್ಯಕ್ಷ ಲಕ್ಷ್ಮಣ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಜಿಪಂ ಮಾಜಿ ಉಪಾಧ್ಯಕ್ಷ ಎಸ್. ದ್ಯಾವೇಗೌಡ, ಅಣ್ಣಪ್ಪ ಶೆಟ್ರು, ಜೆಡಿಎಸ್ ಮುಖಂಡ ವಕ್ತಾರ ಹೊಂಗೆರೆ ರಘು, ನಗರಸಭೆ ಸದಸ್ಯರಾದ ಹೆಚ್.ಬಿ. ಗೋಪಾಲ್, ಅಪ್ಪು, ಮಹೇಶ್, ಸಮೀರ್, ಜಯರಾಂ, ಮನು, ಜಾವಗಲ್ ರಾಜಶೇಖರ್, ಅಭಿ, ಮಹಂತೇಶ್ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News