×
Ad

​ವೀರಾಂಜನೇಯಸ್ವಾಮಿ ವಾರ್ಷಿಕೋತ್ಸವ

Update: 2017-05-18 22:43 IST

ಚಿಕ್ಕಮಗಳೂರು, ಮೇ 18: ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ 27ನೆಯ ವಾರ್ಷಿಕೋತ್ಸವವು ಹೋಮ, ಹವನ, ಅಭಿಷೇಕ, ಅನ್ನಸಂತರ್ಪಣೆಯೊಂದಿಗೆ ಗುರುವಾರ ಸಂಪನ್ನಗೊಂಡಿತು.

ವಿಜಯಪುರದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವದ ಪ್ರಯುಕ್ತ ನಿನ್ನೆ ಬೆಳಗ್ಗೆ ಗುರುದೇವತಾ ಪ್ರಾರ್ಥನೆಯೊಂದಿಗೆ ವಿಶೇಷ ಪೂಜಾಧಿಗಳು ಪ್ರಾರಂಭಗೊಂಡವು.

ಮಹಾಗಣಪತಿಪೂಜೆ, ಪುಣ್ಯಹವಾಚನ, ದೇವನಾಂದಿ, ಮಹಾಸಂಕಲ್ಪ, ಮಹಾಗಣಪತಿಹೋಮ, ಸುಬ್ರಮಣ್ಯಹೋಮ, ನವಗ್ರಹಹೋಮ ನಡೆಯಿತು. ನಂತರ ಶ್ರೀಸ್ವಾಮಿಗೆ ಪವಮಾನಾಭಿಷೇಕ, ಪವಮಾನಹೋಮದ ಪೂರ್ಣಾಹುತಿಯು ಮಧ್ಯಾಹ್ನ ನೆರವೇರಿತು. ಸಂಜೆ ಅಷ್ಟೋತ್ತರ ಶತಕಳಸಸ್ಥಾಪನೆ, ಆಶ್ಲೇಷಬಲಿ ಮತ್ತು ಅಷ್ಟಾವಧಾನಸೇವೆ ನಡೆಯಿತು.
   
ಇಂದು ಬೆಳಗ್ಗೆ ಶ್ರೀವಿರಾಂಜನೇಯಸ್ವಾಮಿ ಅವರಿಗೆ ಏಕದಶವಾರ ರುದ್ರಾಭಿಷೇಕ, ಆಂಜನೇಯ ಮೂಲಮಂತ್ರಹೋಮ, ಕಲಾಹೋಮ ನಡೆಯಿತು. 108 ಕಳಸಗನ್ನು ಪೂಜಿಸಿ ಅದರಿಂದ ಅಭಿಷೇಕ ಮಾಡಲಾಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆದಿದ್ದು, ಸರತಿಸಾಲಿನಲ್ಲಿ ನಿಂತ 3,000ಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಹಿರಿಯನಾಗರಿಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.  

ಸಂಜೆ ಶ್ರೀಸ್ವಾಮಿಗೆ ವಿಶೇಷ ಅಲಂಕಾರ, ಪೂಜೆ, ಭಜನಾಕಾರ್ಯದೊಂದಿಗೆ ವಾರ್ಷಿಕೋತ್ಸವ ಕಾರ್ಯಕ್ರಮಗಳು ಸಂಪನ್ನಗೊಂಡವು. ಶ್ರೀವೀರಾಂಜನೇಯ ಸೇವಾಸಮಿತಿ ಅಧ್ಯಕ್ಷ ರಾಜಶೇಖರ, ಉಪಾಧ್ಯಕ್ಷರಾದ ಪ್ರಭಾಕರ ಮತ್ತು ವಿಠಲ, ಗೌರವಾಧ್ಯಕ್ಷರಾದ ಚಂದ್ರಶೇಖರ್, ಪ್ರಧಾನಕಾರ್ಯದರ್ಶಿ ಎಸ್.ವಿ.ರಾಮಚಂದ್ರ, ಕಾರ್ಯಾಧ್ಯಕ್ಷ ಜಯಪ್ರಕಾಶ್‌ನಾಯ್ಡು, ಸಹಕಾರ್ಯದರ್ಶಿ ಮಂಜುನಾಥ, ಖಜಾಂಚಿ ಮಂಜಪ್ಪಶೆಟ್ಟಿ ಮತ್ತಿತರರು ನೇತೃತ್ವ ವಹಿಸಿದ್ದರು.

ದೇವಾಲಯದ ಪ್ರಧಾನ ಅರ್ಚಕ ವೇ.ಬ್ರ.ಪ್ರಶಾಂತ್‌ಭಟ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News